ಬೆನಕನಹಳ್ಳಿಯಲ್ಲಿ ಸಂಜೆ ಧಾರ್ಮಿಕ ಸಭೆ ನಾಳೆ ಗಣೇಶ ವಿಸರ್ಜನೆ.

ಸೇಡಂ,ಸ,20 : ತಾಲೂಕಿನ ಬೆನಕನಹಳ್ಳಿಯ ಗ್ರಾಮದಲ್ಲಿಂದು ಸಾ. 6-00 ಗಂಟೆಗೆ
ಧಾರ್ಮಿಕ ಸಭೆ ಹಾಗೂ ಬೆನಕನಹಳ್ಳಿ ಬೆನಕೋತ್ಸವದ ಸಾಕ್ಷ್ಯ ಚಿತ್ರ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ
ಶ್ರೀ ಷ.ಬ್ರ. ಡಾ? ಸಿದ್ಧತೋಟೆಂದ್ರ ಶಿವಾಚಾರ್ಯರು,ಪೂಜ್ಯಶ್ರೀಷ.ಬ್ರ.ಸಿದ್ಧವೀರ ಶಿವಾಚಾರ್ಯರು,ಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಶಿವಯೋಗಿಗಳು ಹೆಡಗಿಮದ್ರಿ,ಪೂಜ್ಯ ಶ್ರೀ ಸಂತೋಷಸ್ವಾಮಿ ಮಹಾರಾಜ,ಪೂಜ್ಯ ಶ್ರೀ ಗಿರೀಶ ಮಹಾಸ್ವಾಮಿಗಳು ಪೂಜ್ಯ ಶ್ರೀ ಅಭಿನವ ಕೇದಾರಲಿಂಗ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಈ ವೇಳೆಯಲ್ಲಿ
ಸೇವೆಗೆ ಸೇರಿದ, ಪದಾಧಿಕಾರಿಗಳಾಗಿ ಆಯ್ಕೆಯಾದ ಸೇವೆಯಿಂದ ನಿವೃತ್ತಿಯಾದ ಗ್ರಾಮಸ್ಥರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಅನಂತೇಶ್ವರ ರೆಡ್ಡಿ ಪಾಟೀಲ್ ಬೆನಕನಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಪ್ರತೀ ವರ್ಷ ಭಾದ್ರಪದ ಚೌತಿ ಯ ದಿವಸ ದಂದು ಗ್ರಾಮದ ನಿರ್ಧಿಷ್ಟ ಕುರುಬ ಸಮುದಾಯದ ಗುಜ್ಜೆ ಮನೆತನದವರು ಹತ್ತಿರದ ಕೋಡ್ಲಾ ಗ್ರಾಮದ ಸೀಮೆ ಯಿಂದ ಗಣಪತಿ ಮೂರ್ತಿಯನ್ನು ಮಾಡುವ ಸಲುವಾಗಿ ಎತ್ತಿನ ಬಂಡಿಯಲ್ಲಿ ಕೆಮ್ಮಣ್ಣನ್ನು ಸಾಗಿಸಿ ತಂದು ಊರ ಗಣಪತಿ ಯನ್ನು ಸ್ಥಾಪಿಸುವ ಸ್ಥಳದಲ್ಲಿ ಹಾಕುವರು. ನಂತರ ಸಿದ್ದಣ್ಣ ರಸ್ತಾಪೂರ ಇವರು ಕೆಮ್ಮಣ್ಣನ್ನು ಹದ ಗೊಳಿಸಿ ಕುಟ್ಟಿ ಕೊಟ್ಟ ನಂತರ ಗ್ರಾಮದ ಜೋಶಿ ಮನೆತನದವರಾದ ಶ್ರೀ ವೆಂಕಟಚಾರಿ ಜೋಶಿ ಸುಂದರವಾದ ಚಿಕ್ಕ ಗಣಪತಿ ಮೂರ್ತಿಯನ್ನು ಅಂದು ನಿರ್ಮಿಸುವರು,21 ದಿವಸ ಮುಂಜಾನೆ ಸಾಯಂಕಾಲ ಮಠಪತಿ ಸಾಲಿನ ಸ್ವಾಮಿಗಳು ಪೂಜೆ ನೆರವೇರಿಸುತ್ತಾರೆ. ಅದಕ್ಕೆ ಊರ ಗಣಪತಿ ಎಂದು ಕರೆಯುತ್ತಾರೆ, ಪೂಜೆ ,ಆರತಿ ನೆರವೆರಿದ ನಂತರ ಗ್ರಾಮದ ಪ್ರತಿ ಮನೆಯವರು ತಮ್ಮ,ತಮ್ಮ,ಮನೆಗಳಲ್ಲಿ ತಯಾರಿಸಿದ ಹೋಳಿಗೆ,ಹೂರಣ ಗಡಬು ಮುಂತಾದ ಪ್ರಸಾದ ಪದಾರ್ಥ ಗಳನ್ನು ತಂದು ಊರ ಗಣಪತಿಗೆ ನೈವೇದ್ಯ ಸಲ್ಲಿಸುವ ಮುಲಕ ಗಣಪತಿ ಹಬ್ಬದ ಆಚರಣೆಗಳು ಬೆನಕನಹಳ್ಳಿಯಲ್ಲಿ ಅತಿ ಭಕ್ತಿ ,ಉತ್ಸಾಹ ಗಳಿಂದ ಪ್ರಾರಂಭಗೊಳ್ಳುವುದು,
ನಂತರ ಮಾರನೇ ದಿವಸ ದಿಂದ ಮತ್ತೆ ಹೊಸ ಮಣ್ಣನ್ನು ತಂದು ಹದ ಗೊಳಿಸುತ್ತಾ ಅದರಿಂದ ಮೊದಲಿನ ದಿವಸ ನಿರ್ಮಿಸಿದ ಚಿಕ್ಕ ಗಣಪತಿ ಮೂರ್ತಿ ಗೇ ಅನುಕ್ರಮವಾಗಿ ದಿನೆ ದಿನೇ ದೊಡ್ಡವನ್ನಾಗಿ ಮಾಡುತ್ತಾ ಹೋಗುವರು ಇದೇ ರೀತಿಯಾಗಿ 18 ದಿವಸಗಳ ಪಯರ್ಂತ ಮಾಡುವರು,19 ನೇ ದಿವಸ ಸದರೀ ಮೂರ್ತಿಗೆ ಬಿಳಿಯ ಬಣ್ಣ ಹಚ್ಚಿ ನಂತರ ತಕ್ಕಂತೆ ವಿವಿಧ ಬಣ್ಣ ದ ಪೇಂಟು ಹಚ್ಚಿ ಬಣ್ಣ ಬಣ್ಣ ದ ಮಿಂಚು ಪೆಪರ್ ನಿಂದ ಶ್ರಂಗಾರ ಗೊಳಿಸುವರು, ಆಗ ಮಾತ್ರ ಬೆನಕನಹಳ್ಳಿ ಯ ಗಣಪತಿಗೆ ಜೀವ ಕಳೆ ಬಂದು ಬಿಡುವುದು, ಗಣಪತಿಯ ಎತ್ತರ 6.9 ಅಡಿ ಅಗಲ 3.5 ಅಡಿ ಹಾಗೂ ತೂಕ 10 ಕ್ವಿಂಟಲ್ ಇಲ್ಲಿದೆ.
21 ನೇ ದಿವಸ ವಿಷೇಷ ಪೂಜೆ ನೆರವೇರಿದ ನಂತರ ಹಿಂದಿನ ವರ್ಷ ಮನಸಿನಲ್ಲಿಯೇ ತಮ್ಮ ಮನೋಕಾಮನೆ ನೆರವೇರಿಸಿ ಕೊಡುವಂತೆ ಶ್ರೀ ಮಾಹಾ ಗಣಪತಿಗೆ ಹರಕೆ ಹೊತ್ತು ಬೇಡಿಕೊಂಡಂಥ ಭಕ್ತಾದಿಗಳು ತಮ್ಮ ತಮ್ಮ ಮನೋಕಾಮನೆ ಈಡೇರಿದ್ದ ಪ್ರಯುಕ್ತ ಹರಕೆ ತೀರಿಸುವರು, ಮತ್ತು ಹೊಸದಾಗಿ ಹರಕೆ ಹೊತ್ತು ಕೊಳ್ಳುವವರು ಕೂಡಾ 21ನೇ ದಿವಸ ಬೇಡಿಕೊಳ್ಳುವರು. ಆದ್ದರಿಂದ ಈ 21ನೇ ದಿವಸ ಅತೀ ಮುಖ್ಯ ವಾದ ದಿವಸ ಇದ್ದು ಸಂಪ್ರದಾಯದಂತೆ ಈ ದಿನಕ್ಕೆ “ಅರ್ತಿ ಅಥವಾ ಆರ್ಥಿ ದಿವಸ ಬೆನಕೋತ್ಸವ ಎಂದು ಕರೆಯುವರು,ಅಂದು ರಾತ್ರಿ ಯಿಡೀ ಭಜನೆ ,ಆರತಿ, ವಿವಿದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುವವು, ನಂತರ ಕೊನೆಯ 22ನೇ ದಿವಸ ಶ್ರೀ ಮಾಹಾ ಗಣಪತಿಯ ಭಕ್ತರ ಹೆಗಲೇರಿ ಭವ್ಯ ವಿಸರ್ಜನಾ ಮೆರವಣಿಗೆ ಪ್ರಾರಂಬವಾಗಿ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಸಾಗಿದ್ದಾಗ ಗ್ರಾಮದ ಮತ್ತು ಬೇರೆ ಊರುಗಳಿಂದ ಬಂದಂಥ ಜನರು ಗಣಪತಿಗೆ ಪುಷ್ಪ ಹಾರ ,ಟೆಂಗಿನ ಕಾಯಿ ಸಲ್ಲಿಸಿ ನಮಸ್ಕಾರ ಮಾಡುವರು, ಸಂಜೆ ವೇಳೆಗೆ ಊರ ಅಗಸೆ ಹೊರಗಿನ ಸಾರ್ವಜನಿಕ ದೊಡ್ಡ ಬಾವಿ ಯಲ್ಲಿ ವಿದಿ,ನಿಯಮಗಳ ಅನುಸಾರ ವಿಸರ್ಜನೆ ಮಾಡುವುದರೊಂದಿಗೆ ಬೆನಕನಹಳ್ಳಿಯ ಗಣಪತಿ ಹಬ್ಬವು ಮುಕ್ತಾಯ ಗೊಳ್ಳುತ್ತದೆ,ಅಂದಿನ ದಿನ ಸುತ್ತಲಿನ ಮತ್ತು ದೂರ ದೂರ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಬೆನಕನಹಳ್ಳಿಗೆ ಆಗಮಿಸಿ ಮಾಹಾ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸುವರು,
ಬೆನಕನಹಳ್ಳಿಯಲ್ಲಿ ಸಮಾರು ಎರಡು ನೂರು (200)ವರ್ಷಗಳಿಂದ ಇದೇ ರೀತಿಯಾಗಿ ಶ್ರೀ ಮಾಹಾ ಗಣಪತಿ ಹಬ್ಬವನ್ನು ಆಚರಿಸಲ್ಪಡುತ್ತಿದೆ, ಗಣಪತಿ ಹಬ್ಬದ ಆಚರಣೆಯ ಮತ್ತು ವಿಸರ್ಜನಾ ದಿವಸದ ಮಾಹಾ ದಾಸೋಹದ ಎಲ್ಲಾ ಖರ್ಚು ವೆಚ್ಚ ಗಳನ್ನು ಶ್ರೀ ಅನಂತೇಶ್ವರ ರೆಡ್ಡಿ ಪಾಟೀಲ್ ನೋಡಿಕೊಳ್ಳುವರು, ಗ್ರಾಮದಲ್ಲಿ ಸಾರ್ವಜನಿಕ ರಿಂದ ಯಾವುದೇ ರೀತಿಯಲ್ಲಿ ಗಣಪತಿ ಹಬ್ಬ ಕ್ಕಾಗಿ ಚಂದಾ ಪಟ್ಡಿ ಮಾಡುವುದಾಗಲೀ ,ದೇಣಿಗೆ ಹಣ ಸಲ್ಲಿಸುವುದಾಗಲೀ ವಾಡಿಕೆ ಇರುವುದಿಲ್ಲ,ಬೇಡಿದ ಹರಕೆಗಳನ್ನು ಈಡೇರಿಸಿದ ಬೆನಕನಹಳ್ಳಿಯ ಭಾಗ್ಯಧಾತ ಸಂತಾನ ಭಾಗ್ಯ ಇನ್ನಿತರ ಹರಕೆಗಳನ್ನು ಬೇಡಿಕೊಂಡವರಿಗೆ ಈಡೇರಿಸುತ್ತಾ ಬಂದಿದ್ದಾನೆ. ಬೆನಕನಳ್ಳಿಯ ಬೆನಕನಿಗೆ ಭಕ್ತಾದಿಗಳು ಬೇಡಿದ ಹರಕೆಗಳನ್ನು ಈಡೇರಿಸಿದ ನಂತರ ಭಕ್ತರ ತಮಗೆ ಅನುಗುಣ ಸಾರವಾಗಿ ಎಷ್ಟು ಬೇಡಿಕೊಂಡಿರುತ್ತಾರೆ ಒಂದು ಕ್ವಿಂಟಲ್ 25 ಕೆಜಿ ಸಕ್ಕರೆಯನ್ನು ಹಚ್ಚುತ್ತಾರೆ. 21 ದಿನಗಳ ಕಾಲ ತುಪ್ಪದ ನಂದ ದೀಪದ ಜ್ಯೋತಿ ಶಾಂತವಾಗದೆ ಪ್ರಜ್ವಲಿಸುತ್ತದೆ. ಆ ಜ್ಯೋತಿ ಗ್ರಾಮದ ಹಿತವನ್ನು ಕಾಪಾಡುತ್ತದೆ ಎಂಬ ನಂಬಿಕೆ. ಹಾಗೂ ಈ ಬೆನಕನಿಗೆ ಪಾದಯಾತ್ರೆಯ ಮೂಲಕ ಭಕ್ತಾದಿಗಳು ಬರುತ್ತಾರೆ. ಭಕ್ತಿಯ ಭಕ್ತಿ ಭಾವೈಕ್ಯದೊಂದಿಗೆ ಗಣೇಶ ನನ್ನ ಇಲ್ಲಿ ಪೂಜಿಸುತ್ತಾರೆ. ಈ ಗ್ರಾಮದಲ್ಲಿ ಬಳಪಿನಿಂದ ಮಾಡಿರುವಂತಹ ಗಣಪತಿಗಳು, ಯಾರು ಕೂಡಿಸುವುದಿಲ್ಲ. ಯಾವುದೇ ಡಿಜೆ.ಮೂಲಕ ವಾಹನದ ಮೇಲೆ ಗಣೇಶನನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುವುದಿಲ್ಲ. ಬೇನಕೋತ್ಸವ ಕಾರ್ಯಕ್ರಮಗಳು ಶ್ರೀ ಬಸವರಾಜ ಪಾಟೀಲ್ . ಶೀ ಶಿವಲಿಂಗ ರೆಡ್ಡಿ ಪಾಟೀಲ್ (ರೆಡ್ಡಿ ಗೌಡ್ರು) ಶಿವಲಿಂಗ ರೆಡ್ಡಿ ಎಸ್ ಪಾಟೀಲ್ ಹಾಗೂ ಸಮಸ್ತ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯುತ್ತಿವೆ.