ಬೆದರಿಕೆ ಸಹಿಸಲ್ಲ, ಅವ್ಯವಹಾರ ಸುಳ್ಳು:ಮುತ್ತು

ಬಳ್ಳಾರಿ, ಮಾ.27: ಯಾರೇ ಆಗಲಿ ನಮ್ಮ ಹೆಸರು ಹೇಳಿಕೊಂಡು ಬೇರೆಯವರಿಗೆ ಜೀವ ಬೆದರಿಕೆ ಹಾಕಿಲ್ಲ, ಹಾಗೊಮ್ಮೆ ಹಾಕಿದರೆ ಸಹಿಸಲ್ಲ, ಅಲ್ಲದೆ ಲಾರೀ ಮಾಲೀಕರ ಸಂಘ ಸಂಗ್ರಹಿಸುವ ಶುಲ್ಕದ ಹಣ ಬಳಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಬಳ್ಳಾರಿ ಜಿಲ್ಲಾ ಲಾರೀ ಮಾಲೀಕರ ಸಂಘದ ಗೌರವ ಅಧ್ಯಕ್ಷ ಎನ್.ಮೃತ್ಯುಂಜಯ (ಮುತ್ತು) ಹೇಳಿದ್ದಾರೆ.
ಸಂಘದ ಕಛೇರಿಯಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಜಿಲ್ಲೆಯಲ್ಲಿ ಒಂದೇ ಅಸೋಸಿಯೇಷನ್ ಇದ್ದರೆ ಉತ್ತಮ, ಒಗ್ಗಟ್ಟು ಸಂಘಟನೆಯಿಂದ ಲಾರೀ ಮಾಲೀಕರ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ. ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನನಗೆ ಪ್ರತ್ಯೇಕ ಹಣ ನೀಡುತ್ತಿಲ್ಲ. ಪ್ರತಿ ತಿಂಗಳು ಲೆಕ್ಕಚಾರ ಮಾಡಿ ಸಂಘದ ಸಭೆಯಲ್ಲಿ ಸಮ್ಮತಿ ಪಡೆಯುತ್ತಿದೆ.
ಅವ್ಯವಹಾರ ಆಗಿದ್ದರೆ ಬಂದು ಪ್ರಶ್ನಿಸಲಿ ಉತ್ತರ ನೀಡಲಿದೆ. ಲಾರೀ ಮಾಲೀಕರಿಗೆ ಶೇ.18ರಷ್ಟು ಬಾಡಿಗೆ ಹೆಚ್ಚು ಮಾಡಿದ್ದರಿಂದ ಇಲ್ಲಿ ಲಾರಿ ತಂಗುದಾಣದ ಅಭಿವೃದ್ಧಿ ನೋಡಿ ನನಗೆ ಸಿಮ್ಟ್ ಗೆ ಉಪಾಧ್ಯಕ್ಷ ನನ್ನಾಗಿ ಆಯ್ಕೆ ಮಾಡಿದೆ. ನನ್ನ ಅಭಿವೃದ್ಧಿ ಸಹಿಸದವರರು ವಿನಾಕಾರಣ ಆರೋಪ ಮಾಡುತ್ತಿದ್ದಾರೆಂದರು. ಪೆದ್ದನ್ನ ಅವರು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಕ್ಕೆ ಅವರ ಮೊಬೈಲ್ ಕಳೆದು ಮೂರು ದಿನ ಆಗಿದೆ. ಅದನ್ನು ತೆಗೆದುಕೊಂಡು ಯಾರಾದರು ಬೇರೆಯವರು ಮಾಡಿರಬಹುದೆಂದರು.
ಕಾರ್ಯದರ್ಶಿ ಎಂ.ಎನ್.ಬಸವರಾಜ್ ಮಾತನಾಡಿ, ರಾಜ್ಯ ಅಷ್ಟೇ ಅಲ್ಲ ದೇಶದ ಎಲ್ಲೆಡೆ ಈ ರೀತಿ ಶುಲ್ಕ ಸಂಗ್ರಹ ಇದೆ. ಅಸೋಸಿಯೇಷನ್ ನಿಂದ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಶೌಚಾಲಯ ನಿರ್ಮಿಸುತ್ತಿದೆ. ಯಾವುದೇ ಅವ್ಯವಹಾರ ಇಲ್ಲ. ಎಲ್ಲವುದು ಲೆಕ್ಕ ಇಟ್ಟಿದೆ ಎಂದರು. ಪೆದ್ದನ್ನ ಅವರು ನಾನು ಎಸ್ಸಿ ಇದ್ದೇನೆ. ನನ್ನ ಸಹಿಸದೆ ಈ ರೀತಿ ಆರೋಪ ಮಾಡುತ್ತಿದ್ದಾರೆಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ಮುನ್ನಬಾಯ್, ಸಹ ಕಾರ್ಯದರ್ಶಿ ಪಾಂಡುರಂಗ ಮೊಲಾದವರು ಇದ್ದರು.