
ಕೋಲಾರ,ಏ.೮: ಬಿಜೆಪಿ ಮಾಲೂರು ತಾಲ್ಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ ಅವರು ತಮ್ಮ ಹಿಂಬಾಲಕರಿಂದ ಮೇಲೆ ಹಲ್ಲೆಯ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಾಲೂರು ತಾಲ್ಲೂಕು ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಶ್ರೀ ಚರಣ್ ಕೆ. ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾನು ಬಿಜೆಪಿ ಪಕ್ಷದಲ್ಲಿ ಸುಮಾರು ೧೦ ವರ್ಷಗಳಿಂದ ಕಾರ್ಯಕರ್ತನಾಗಿ – ಜಿಲ್ಲಾ ಯುವ ಮೋರ್ಚ ಕಾರ್ಯಕಾರಿಣಿ ಸದಸ್ಯರಾಗಿ, ಈಗ ತಾಲೂಕು ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕನಾಗಿ ಜವಾಬ್ದಾರಿ ನಿರ್ವಹಿಸುತ್ತಿರುವೆ. ಕಳೆದ ಸುಮಾರು ೨ ವರ್ಷಗಳಿಂದ ೨೪/೭ ಮಾಲೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ಪುರ ನಾರಾಯಣಸ್ವಾಮಿ ರವರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಅವರು ಜೊತೇಯಲ್ಲಿದ್ದವರಿಗೆ ಮೋಸ ಮಾಡಿರುವುದು ಕಳವಳಕಾರಿ ಬೆಳವಣಿಗೆ ಎಂದಿದ್ದಾರೆ.
ಪುರ ನಾರಾಯಣಸ್ವಾಮಿ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸಂಕಲ್ಪ ಯಾತ್ರೆಗೆ ಪಕ್ಷ ನೀಡಿದ ೨೫ ಲಕ್ಷ ರೂಗಳನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ಜನಸಂಕಲ್ಪ ಯಾತ್ರೆಯ ಹಿಂದಿನ ದಿನ ನಾಳೆ ಕಾರ್ಯಕ್ರಮಕ್ಕೆ ಬಸ್‌ಗೆ ಕೊಡಲು ಹಣವಿಲ್ಲ: ಜನಗಳಿಗೆ ಕೊಡಲು ಹಣವಿಲ್ಲ. ತನ್ನ ಮಾನ ಹೋಗುತ್ತದೆ ಜನ ಸೇರಿಸಲಿಲ್ಲವೆಂದರೆ ಪಕ್ಷದ ಮರ್ಯಾದೆ ಹೋಗುತ್ತದೆಂದು ಗೋಗರೆದು ನನ್ನ ಬಳಿ ಅಂದು ಸುಮಾರು ಲಕ್ಷ ರೂಪಾಯಿ ಪಡೆದು ಅದಕ್ಕೂ ಮುಂಚೆ ಆನೇಕ ಕಾರ್ಯಕ್ರಮಕ್ಕೆ ಒಟ್ಟಾರೆ ೨೧ ಲಕ್ಷ ಹಣ ಸಾಲವಾಗಿ ಪಡೆದು ಅದರಲ್ಲಿ ೧೨ ಲಕ್ಷ ರೂಪಾಯಿ ಹಿಂದಿರುಗಿಸಿರುತ್ತಾರೆ. ಉಳಿದ ೯ ಲಕ್ಷ ಮೊತ್ತಕ್ಕೆ ಚೆಕ್ ನೀಡಿದ್ದು ಅದು ಖಾತೆಯಲ್ಲಿ ಹಣ ಇಲ್ಲ ಎಂದು ಹಿಂಬರಹ ನೀಡಿರುತ್ತಾರೆ. ಇದರ ಜೊತೆ ಅವರು ಪುರ ಗ್ರಾಮದಲ್ಲಿ ೨ ಗುಂಟೆ ಜಾಗ, ಕ್ರಯದ ಕರಾರು ಪತ್ರ ಮಾಡಿಕೊಟ್ಟಿದ್ದು ಅದು ಸಹ ಮೋಸವಾಗಿರುತ್ತದೆ. ಅದನ್ನು ಕೆಲ ವರ್ಷಗಳ ಹಿಂದೆ ಶ್ರೀನಿವಾಸ್ ಎಂಬವವರಿಗೆ ಕರಾರು ಪತ್ರ ಮಾಡಿಕೊಟ್ಟಿದ್ದು ಅದು ರಸ್ತೆಯ ಜಾಗವಾಗಿರುತ್ತದೆ ಅದಕ್ಕೆ ಶ್ರೀನಿವಾಸ್ ರವರು ಬೇಡ ಎಂದು ಹಣ ವಾಪಸ್ಸು ಕೇಳಿರುತ್ತಾರೆ. ಅವರಿಗೂ ಹಣ ಹಿಂದಿರುಗಿಸದೆ ನನ್ನ ಬಳಿಯೂ ಹಣ ಪಡೆದು ಮೋಸ ಮಾಡಿರುತ್ತಾರೆ. ಪುರ ನಾರಾಯಣಸ್ವಾಮಿ ರವರು ಅವರ ಹಿಂಬಾಲಕರಿಂದ ನನ್ನ ಮೇಲೆ ಹಲ್ಲೆ ಮಾಡಿಸಿ ನನ್ನ ವಿರುದ್ಧವೇ ಪೋಲೀಸ್ ದೂರು ನೀಡುವ ಜೊತೆಗೆ ಅವರ ಹಿಂಬಾಲಕರಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಇಲ್ಲ ಸಲ್ಲದ ದೂರು ದಾಖಲಿಸಿ ಅವರ ರಾಜಕೀಯ ಪ್ರಭಾವ ಬೀರಿ ನನ್ನ ಮೇಲೆ ದೂರು ದಾಖಲಿಸುವ ಕುತಂತ್ರ ಮಾಡಿರುವುದು ತಿಳಿದು ಬಂದಿರುತ್ತದೆ. ಹಾಗೂ ಇದೇ ರೀತಿ ಅವರು ಅನೇಕ ಮೋಸದ ಕೆಲಸ ಮಾಡಿದ್ದು ಆ ಮಾಹಿತಿ ನನಗೆ ಗೊತ್ತಿರುತ್ತದೆ ಇದಕ್ಕೆ ಸಂಬಂದಿಸಿದಂತೆ ಅಧ್ಯಕ್ಷರು ನನಗೆ ಜೀವ ಬೆದರಿಕೆ ಹಾಕಿರುತ್ತಾರೆ.
ಅದೇ ರೀತಿ ತಾಲ್ಲೂಕು ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಹನುಮಂತಪ್ಪ ರವರು ನಾನು ಈ ಮೋಸದ ವಿಚಾರ ನನ್ನ ಸ್ನೇಹಿತರಿಗೆ, ಪರಿಚಯಸ್ಥರಿಗೆ ತಿಳಿಸಿದ್ದಕ್ಕೆ ವಾಟ್ಸಾಪ್‌ನಲ್ಲಿ ನೀನು ಇನ್ನು ನೀನು ಹೀಗೆ ಮುಂದುವರೆದರೆ, ನಿನ್ನ ಮನೆಗೆ ಹೋಗಬೇಕಾಗುತ್ತದೆ ಇನ್ನೂ ಮೆಸೇಜ್ ಮಾಡಿದ್ರೆ ನಿನ್ನ ಮನೆಗೆ ಬಂದು ಸುಮ್ಮನೆ ವಾಪಾಸ್ ಬರಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಸಂಬಂಧ ಮಾಲೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.