ಬೆಣ್ಣೆ ಹಣ್ಣಿನ ಸೇವನೆ ಇರಲಿ

ಅವಕಾಡೊ ಹಣ್ಣು ಇದು ಸಾಮಾನ್ಯವಾಗಿ ನಮಗೆ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಈ ಹಣ್ಣು ವಿದೇಶಿ ಆಗಿದ್ದರು. ಭಾರತದಲ್ಲಿ ಇದನ್ನು ಬೆಳೆಯುತ್ತಾರೆ, ಹಾಗೂ ಹೆಚ್ಚು ಉಪಯೋಗ ಸಹ ಮಾಡುತ್ತಾರೆ. ಈ ಹಣ್ಣು ಸೇವನೆ ಮಾಡಿದರೆ ಲಾಭಗಳು ಹಲವಾರು.ವಾರದಲ್ಲಿ ಎರಡು ಬಾರಿ ಅವಕಾಡೊ ತೈಲದಿಂದ ಮಸಾಜ್ ಮಾಡುವುದರಿಂದ ತ್ವಚೆಯು ಸಮಸ್ಯೆಗಳು ದೂರವಾಗುತ್ತದೆ.

  • ಬಟರ್ ಫ್ರೂಟ್ನಲ್ಲಿ ವಿಟಮಿನ್ ಎ, ಬಿ ಮತ್ತು ಇ ಅಂಶಗಳು ಧಾರಾಳವಾಗಿರುತ್ತದೆ. ಇದರೊಂದಿಗೆ ಆರೋಗ್ಯಕ್ಕೆ ಅನುಕೂಲಕರವಾಗಿರುವ ಪ್ರೋಟೀನ್, ಫೈಬರ್ ಮತ್ತು ಖನಿಜಾಂಶಗಳು ಇದರಲ್ಲಿದೆ. ಅವಕಾಡೊದಲ್ಲಿ ಮೊನೊಅನ್ಸಚುರೇಟೆಡ್ ಕೊಬ್ಬಿನಾಂಶವಿದ್ದರೂ ಇದು ಆರೋಗ್ಯಕ್ಕೆ ಹಾನಿಕಾರಕವಲ್ಲ.
  • ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಹಾಗೆಯೇ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣಿನಲ್ಲಿ ಕಂಡು ಬರುವ ಫಾಲಿಕ್ ಆಯಸಿಡ್ ಆರೋಗ್ಯವನ್ನು ಹೆಚ್ಚಿಸುತ್ತದೆ.
    ನಿಯಮಿತವಾಗಿ ಬೆಣ್ಣೆ ಹಣ್ಣನ್ನು ಸೇವಿಸಿದರೆ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.
  • -ಬೆಣ್ಣೆ ಹಣ್ಣು ಮತ್ತು ಪಪ್ಪಾಯ ಹಣ್ಣಿನ ಜ್ಯೂಸ್ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ.
  • -ಬೆಣ್ಣೆ ಹಣ್ಣಿನ ಪೇಸ್ಟ್ಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಶಮನವಾಗುತ್ತವೆ.
  • -ಉಗುರು ತೆಳ್ಳಗಿದ್ದು ಪದೇ ಪದೇ ಮುರಿಯುತ್ತಿದ್ದರೆ ಪ್ರತಿ ದಿನ ಬೆಣ್ಣೆ ಹಣ್ಣಿನ ಎಣ್ಣೆಯನ್ನು ಉಗುರುಗಳಿಗೆ ಮಸಾಜ್ ಮಾಡಿದರೆ ಉಗುರು ಗಟ್ಟಿಯಾಗುತ್ತದೆ.
  • -ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಣ್ಣೆ ಹಣ್ಣನ್ನು ಸೇವಿಸಿದರೆ ಗರ್ಭಿಣಿಯರ ವಾಂತಿ ನಿಲ್ಲುತ್ತದೆ.
  • -ಬೆಣ್ಣೆ ಹಣ್ಣಿನ ಎಲೆಗಳನ್ನು ರುಬ್ಬಿ ಹೇರ್ ಪ್ಯಾಕ್ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಕಪ್ಪಗಾಗುತ್ತದೆ.