ಬೆಣ್ಣೆಯಲ್ಲಿರುವ ಆರೋಗ್ಯಕರ ಗುಣಗಳು

ಬೆಣ್ಣೆಯಲ್ಲಿರುವ ಕೊಬ್ಬಿನಂಶವಾದ ಗ್ಲೈಕೋಸ್ಫಿಂಗೊಲಿಪಿಡ್ಸ್ ಜಠರಕ್ಕೆ ಬ್ಯಾಕ್ಟಿರಿಯಾ ಸೋಂಕು ತಾಗದಂತೆ ರಕ್ಷಣೆ ಮಾಡುತ್ತದೆ. ದೇಹದಲ್ಲಿ ವಿಟಮಿನ್ ಎ ಕೊರತೆಯಿಂದ ಥೈರಾಯ್ಡ್ ಬರುತ್ತದೆ. ಆದರೆ ಬೆಣ್ಣೆಯಲ್ಲಿ ವಿಟಮಿನ್ ಎ ಅಧಿಕ ಇರುವುದರಿಂದ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಬೆಣ್ಣೆಯಲ್ಲಿ ವೂಲ್ಜನ್ ಫ್ಯಾಕ್ಟರ್ ಎಂಬ ಅಂಶವಿದ್ದು ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಪ್ಪ ಹಾಗೂ ಬೆಣ್ಣೆ ಎರಡೂ ಆರೋಗ್ಯಕರವಾದ ಆಹಾರವಾಗಿದ್ದು ಅದರಲ್ಲಿರುವ ಪೋಷಕಾಂಶಗಳು ತುಂಬಾ ಒಂದೇ ರೀತಿ ಇದೆ. ತುಪ್ಪ ಹಾಗೂ ಬೆಣ್ಣೆ ಅದರದೇ ಆದ ರುಚಿ ಹಾಗೂ ಆರೋಗ್ಯಕರ ಗುಣಗಳನ್ನು ಹೊಂದಿದ್ದು ಅವರ ಆರೋಗ್ಯಕ್ಕೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಬಳಸಬಹುದು. ಆದರೆ ಲ್ಯಾಕ್ಟೋಸ್ ಅಸಮತೋಲನ ಇರವವರಿಗೆ ಬೆಣ್ಣೆಗಿಂತ ತುಪ್ಪ ಅತ್ಯುತ್ತಮವಾದ ಆಹಾರವಾಗಿದೆ. ಕೆಲವರಿಗೆ ಬೆಣ್ಣೆ ತಿಂದರೆ ಅಲರ್ಜಿ ಉಂಟಾಗುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಲ್ಯಾಕ್ಟೋಸ್ ಅಂಶ. ಇದರಲ್ಲಿರುವ ಹಾಲಿನ ಪ್ರೊಟೀನ್ ಲ್ಯಾಕ್ಟೋಸ್ ಅಸಮತೋಲನ ಇರುವ ವ್ಯಕ್ತಿಯಲ್ಲಿ ಗುಳ್ಳೆಗಳು, ತುರಿಕೆ, ಅಸ್ತಮಾ ಉಲ್ಭಣವಾಗುವಂತಹ ತೊಂದರೆಗಳು ಕಾಣಿಸಿಕೊಳ್ಳುವುದು. ಆದರೆ ತುಪ್ಪದಲ್ಲಿ ಹಾಲಿನ ಯಾವುದೇ ಪ್ರೊಟೀನ್ ಅಂಶವಿಲ್ಲದಿರುವ ಕಾರಣ ಲ್ಯಾಕ್ಟೋಸ್ ಅಸಮತೋಲನ ಇರುವವರಿಗೆ ತುಪ್ಪ ಒಳ್ಳೆಯದು.