ಬೆಣ್ಣೆತೂರಾ ನೀರು ಕಾಲುವೆಗೆ ಬಿಡಲು ಆಗ್ರಹ

ಕಲಬುರಗಿ:ನ.3: ಚಿತ್ತಾಪೂರ ತಾಲೂಕಿನ ರೈತರ ಹೊಲಗಳಿಗೆ ನೀರು ಇಲ್ಲದೇ ಬೆಳೆಗಳು ಹಾಳಾಗುತ್ತಿದ್ದು ಕೂಡಲೇ ಕಾಲುವೆ ಕೆಳಭಾಗದ ಹೊಲಗಳಿಗೆ ಬೆಣ್ಣೆತೂರಾ ನೀರು ಬಿಡಬೇಕು ಎಂದು ಬಿಜೆಪಿ ಮುಖಂಡ ಗುಂಡಪ್ಪ ಟಿ ಮತ್ತಿಮಡು ಅವರು ಆಗ್ರಹಿಸಿದರು.

                ಈ ಕುರಿತು ಗುರುವಾರ ಹೆಬ್ಬಾಳ ಬೆಣ್ಣೆತೂರಾ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಭೇಟಿ ನೀಡಿ ಮನವಿ ಮಾಡದ ಅವರು, ತಾಲೂಕಿನಲ್ಲಿ ಮಳೆ ಕಡಿಮೆ ಪ್ರಮಾಣ ಇದ್ದು,ರೈತರು ಈಗಾಗಲೇ ಕೆಲ ದಿನಗಳ ಹಿಂದೆ ಬಿತ್ತನೆ ಮಾಡಿ ಮಳೆ ಹಾಗೂ ಕಾಲುವೆ ನೀರಿಗಾಗಿ ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಹೆಬ್ಬಾಳ ಬೆಣ್ಣೆತೂರಾ ವ್ಯಾಪ್ತಿಯ ಮತ್ತಿಮೂಡ, ಕೋರವಾರ, ಇಂಗನಕಲ್, ಕಲಗುರ್ತಿ, ಮಲಘಾಣ,ಗುಂಡಗುರ್ತಿ,ವಚ್ಚಾ,ಮುಗುಟಾ, ಪೇಟಶಿರೂರ, ಬೆಣ್ಣೂರ,ಸಂಗಾವಿ ಮತ್ತು ಹೆಬ್ಬಾಳ ವ್ಯಾಪ್ತಿಯ ಎಲ್ಲಾ ಗ್ರಾಮದ ಹೊಲಗಳಿಗೆ ಸಮರ್ಪಕವಾಗಿ ನೀರು ಬಿಡಬೇಕು ಎಂದು ಅವರು ಆಗ್ರಹಿಸಿದರು. ಜಿಲ್ಲೆಯಲ್ಲಿ ಮಳೆಯೂ ಇಲ್ಲ, ಕಾಲುವೆಗೂ ನೀರು ಬರುತ್ತಿಲ್ಲ ಬೆಳೆಗಳು ಒಣಗಿ ಹೋಗಿದ್ದು, ಇನ್ನೂ ನಾಲ್ಕು ದಿನಗಳಲ್ಲಿ ಮಳೆ ಅಥವಾ ಕಾಲುವೆಗೆ ನೀರು ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಂಡರು. ಕಾಲುವೆ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ಬರದೆ ಬೆಳೆಗಳು ಒಣಗುತ್ತಿವೆ ಎಂದು ಅಧಿಕಾರಿಗಳ ಎದುರು ಅವರು ಗೋಳು ತೋಡಿಕೊಂಡರು. ಒಣಗುತ್ತಿರುವ ಬೆಳೆಗಳಿಗೆ ನೀರು ಕೊಡಬೇಕು.ರೈತರನ್ನು ಮುರ್ಖರನ್ನಾಗಿಸುವ ಕುತಂತ್ರ ನಮಗೆ ಟಪ್ ???ಂಡ ಆನ್ ಪದ್ದತಿ ಬೇಡ ರಾಜ್ಯ ಸರಕಾರ ತಾನು ನೀಡಿದ ಆದೇಶದಂತೆ ನೀರು ಹರಿಸಬೇಕು ಎಂದರು.ಸಚಿವ ಪ್ರಿಯಾಂಕ ಖರ್ಗೆ ಕಿಚಿಂತ್ತೂ ಮನ್ನಣೆ ನೀಡುತ್ತಿಲ್ಲ.ಇದು ಅವರ ರೈತ ವಿರೋಧಿ ಧೋರಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ತಕ್ಷಣ ವಾರದಲ್ಲಿ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಬೆಣ್ಣೆತೂರಾ ನೀರು ಬಿಡಲು ಪ್ರಯತ್ನಿಸಬೇಕು.ಇಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ದೇವರಾಜ ತಳವಾರ,ಶರಣು ಸಂಗಾವಿ ಸಾಹುಕಾರ, ನಿಂಗಪ್ಪ ಪೂಜಾರಿ ಸೇರಿದಂತೆ ಹಲವು ಮುಖಂಡರು ರೈತರೊಂದಿಗೆ ಬೆಣ್ಣೆತೂರಾ ಅಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.