ಬೆಣಕಲ್ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಕುಕನೂರು, ಸೆ.16:  ತಾಲೂಕಿನ ಬೆಣಕಲ್ ಗ್ರಾಮದ ಎರಡನೇ ಅಂಗನವಾಡಿಯಲ್ಲಿ ಶಿಶು ಅಭಿವೃದ್ಧಿ ಇಲಾಖೆ ಮತ್ತು ಅರೋಗ್ಯ  ಇಲಾಖೆ ವತಿಯಿಂದ ಪೋಷಣ್ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು
ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಮಾಧವಿ ವೈದ್ಯ ಅವರು ಮಾತನಾಡಿ, ತಾಯಿ ಮತ್ತು ಮಗುವಿನ ಪೌಷ್ಟಿಕ ಆಹಾರ ಸೇವನೆಯ ಕ್ರಮಗಳು ಮತ್ತು ವಿಶೇಷವಾಗಿ ಬಾಣಂತಿಗರಿಗೆ ಸಾವಿರ ದಿನಗಳ ಮಹತ್ವ ಮತ್ತು ಆ ದಿನಗಳಲ್ಲಿ ಅರೋಗ್ಯದ ಬಗ್ಗೆ ಅನುಸರಿಸಬೇಕಾದ ಕಾಳಜಿ ಜನನದ ನಂತರ ಎರಡು  ವರ್ಷದ ವರೆಗಿನ ಮಗುವಿನ ಅರೋಗ್ಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Attachments area