ಬೆಟ್ಟದಲ್ಲಿ ಮಂಗಗಳಿಗೆ ಆಹಾರ ವಿತರಣೆ

ಮೈಸೂರು.ಏ.25. ಕೊರೋನಾ 2 ಸೊಂಕಿನಿಂದ ಭಾರತವೇ ಲಾಕ್ ಡೌನ್ ಆಗಿದ್ದು ಮೈಸೂರು ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ, ಪಾತಿ ಫೌಂಡೇಷನ್ ವತಿ ಯಿಂದಚಾಮುಂಡಿ ಬೆಟ್ಟ ಸುತ್ತಮುತ್ತಲಲ್ಲಿರುವ ಮಂಗಗಳಿಗೆ ಹಾಗೂ ಮಹರಾಜ ಕಾಲೇಜು ಮೈದಾನ ಯುವರಾಜ ಕಾಲೇಜು ರಾಮಸ್ವಾಮಿ ವೃತ್ತದ ಸುತ್ತಮುತ್ತಲು ರಸ್ತೆಗಳಲ್ಲಿ ಸಿಗುವ ಮೂಕಪ್ರಾಣಿಗಳಾದಬೀದಿನಾಯಿಗಳಿಗೆ ಬಿಸ್ಕೆಟ್, ಬಾಳೆಹಣ್ಣು , ಬನ್ ಹಾಲು ನೀರು ಆಹಾರ ನೀಡಲಾಯಿತು.
ಸಂಚಾರಿ ದೇವರಾಜ ಪೆÇೀಲಿಸ್ ಠಾಣೆಯ ನಿರೀಕ್ಷಕರಾದ ಮುನಿಯಪ್ಪ ರವರು ಮಾತನಾಡಿ ಮನುಷ್ಯರು ಅವರವನ್ನ ಕಾಪಾಡುಕೊಳ್ಳುವಲ್ಲಿ ಪ್ರಾಣ ಉಳಿಸುಕೊಳ್ಳುವಲ್ಲಿ ಮುಂದಾಗುತ್ತೇವೆ, ಅನ್ನದಾನ ದಿನಸಿ ವಿತರಣೆ ಮಾಡುತ್ತಿದ್ದೇವೆ ಇದು ಒಳ್ಳೆಯ ಬೆಳವಣಿಗೆ ಆದರ ಇದರ ಜೊತೆಯಲ್ಲಿ ಮೂಕ ಪ್ರಾಣಿ ಪಕ್ಷಿಗಳನ್ನ ಕಾಪಾಡುವುದನ್ನು ನಾವು ಮರೆಯಬಾರದು.
ನಮ್ಮ ಬೀದಿಯಲ್ಲಿ ಸಿಗುವ ಬೀದಿನಾಯಿಗಳಿಗೆ ಮತ್ತು ದನ ಕರುಗಳಿಗೆ ಕನಿಷ್ಠ ಒಂದೊತ್ತಾದರೂ ಆಹಾರವನ್ನು ನೀಡಲು ಮುಂದಾಗೋಣ, ಮೊದಲು ಪ್ರಾಣಿಪಕ್ಷಿಗಳ ರಕ್ಷಣೆ ಪೆÇೀಷಣೆಗೆ ಗಮನನೀಡಬೇಕಾಗಿದೆ ನಗರಪಾಲಿಕೆ ವಾರ್ಡ್ ವ್ಯಾಪ್ತಿಯಲ್ಲಿ ಪ್ರಾಣಿಪಕ್ಷಿಗಳ ರಕ್ಷಣೆ ಮತ್ತು ಆಹಾರಪೆÇರೈಕೆ ಮಾಡಲು ಸಾಮಾಜಿಕ ಸಂಘ ಸಂಸ್ಥಗಳನ್ನು ಬಳಸಿಕೊಂಡು ಅನಿಮಲ್ಸ್ ಪೆÇ್ರಟೆಕ್ಷನ್ ಟಾಸ್ಕ್ ಪೆÇೀರ್ಸ್ ರಚಿಸಲು ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಮಹಾನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ವಿಕ್ರಂ ಅಯ್ಯಂಗಾರ್, ಮಂಜು ಗೌಡ, ಹರೀಶ್ ನಾಯ್ಡು, ರಘು ಹಾಗೂ ಇನ್ನಿತರರು ಹಾಜರಿದ್ದರು