ಬೆಂ. ಪೂರ್ವ ತಾ.ಪಂ. ಗೆ ಸಶಕ್ತೀಕರಣ ಪುರಸ್ಕಾರ

ಕೆ.ಆರ್. ಪುರ, ಏ. ೪- ಗ್ರಾಮಗಳ ಅಭಿವೃದ್ಧಿ ಮತ್ತು ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಹಿನ್ನಲೆ ಕೇಂದ್ರ ಸರ್ಕಾರ ವಿತರಿಸುವ ದೀನ್ ದಾಯಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ ಪ್ರಶಸ್ತಿಗೆ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತಿಯು ಭಾಜನವಾಗಿದೆ.
ಮೊಟ್ಟಮೊದಲ ಬಾರಿಗೆ ಬೆಂಗಳೂರು ಪೂರ್ವ ತಾ.ಪಂ.ಗೆ ಪ್ರಶಸ್ತಿ ದೊರೆತ ಅನುದಾನದಲ್ಲಿ ೧೧ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೆ ಹಾಗೂ ಸಮರ್ಪಕವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆ ಮೊಟ್ಟಮೊದಲ ಬಾರಿಗೆ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತಿಗೆ ಪುರಸ್ಕಾರ ದೊರೆತಿದೆ.
ರಾಜ್ಯದ ಹಾಸನ ಜಿ.ಪಂ.ಗೆ ಬೆಂಗಳೂರು ನಗರದ ಪೂರ್ವ ತಾ.ಪಂ.ಗೆ ಮತ್ತು ಮಂಡ್ಯ ಜಿಲ್ಲೆಯ ಪಾಂಡವಪುರ ತಾ.ಪಂ. ಸೇರಿದಂತೆ ಹಾವೇರಿ. ಮಂಡ್ಯ, ಮೈಸೂರು ಜಿಲ್ಲೆಗಳ ಒಂದೊಂದು ಗ್ರಾಮ ಪಂಚಾಯತಿಗಳಿಗೆ ಪುರಸ್ಕಾರ ಲಭಿಸಿದೆ.
ಪ್ರತಿ ವರ್ಷದಂತೆ ಕೇಂದ್ರ ಸರ್ಕಾರ ನೀಡುವ ವಿವಿಧ ಬಗೆಯ ಪುರಸ್ಕಾರಕ್ಕೆ ಜಿಲ್ಲಾ ಮತ್ತು ರಾಜ್ಯ ಪರಿಶೀಲನಾ ಸಮಿತಿಯ ತಂಡ ಸಲ್ಲಿಸಿದ ವರದಿಯನ್ನು ಆಧರಿಸಿ ಪುರಸ್ಕಾರ ಬಂದಿದೆ.
ಬೆಂಗಳೂರು ಪೂರ್ವ ತಾ.ಪಂ ೧೧ ಗ್ರಾ.ಪಂ.ಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಗೆ ಆಯಾ ಪಂಚಾಯತಿ ವ್ಯಾಪ್ತಿಗಳಲ್ಲಿ ಪ್ರತ್ಯೇಕವಾದ ಸ್ಥಳವನ್ನು ಗುರುತಿಸಿ ಪಂಚಾಯಿತಿ ವಶಕ್ಕೆ ಪಡೆಯಲಾಗಿದೆ.
ಟ್ರ್ಯಾಕ್ಟರ್ ಮೂಲಕ ಮನೆಮನೆಗೆ ತೆರಳಿ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕವಾಗಿ ಪಡೆದು. ಒಣ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆಗೆ ಬಳಸಲಾಗುವುದು.
“ಹಸಿಕಸವನ್ನು ಹಸಿರು ದಳ ಮತ್ತು ಮಹೇಂದ್ರ ಟೆಕ್ ಸಂಸ್ಥೆಗಳ ಸಹಯೋಗದಲ್ಲಿ ಬಯೋ ಗ್ಯಾಸ್ ಘಟಕ ಸ್ಥಾಪಿಸಿ (ಜೈವಿಕ ಅನಿಲವನ್ನು) ಕಸದಿಂದ ರಸವನ್ನು ತಯಾರಿಸುವ ಯೋಜನೆ ರೂಪಿಸಲಾಗಿದೆ.
ಇದರಿಂದ ಗ್ರಾಮಗಳು ಸ್ವಚ್ಛಂದವಾಗಲಿವೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಗ್ರಾಮಗಳ ಅಭಿವೃದ್ಧಿಗೂ ಹಣ ಸಹ ದೂರೆಯಲಿದೆ.
ಸ್ವಂತ ಕಟ್ಟಡ ಹೊಂದಿರುವ ಗ್ರಾ.ಪಂ.ಗಳಲ್ಲಿ ಮಳೆ ನೀರು ಕೊಯ್ಲು ಹಾಗೂ ಸೋಲಾರ್ ಸಹ ಅಳವಡಿಸಲಾಗಿದೆ. ವಿದ್ಯುತ್ ಶಕ್ತಿ ಮರು ಸಮನ್ವಯತೆಗೆ ಒತ್ತು ನೀಡಲಾಗಿದೆ. ಬೀದಿದೀಪ ಮತ್ತು ಕುಡಿಯುವ ನೀರಿಗಾಗಿ ಅಂದಾಜು ಮೂಲಕ ಕಟ್ಟುತ್ತಿದ್ದ ಹಣವನ್ನು ಬಿಲ್ ರೂಪಕ್ಕೆ ತರಲಾಗಿದೆ. ಇದರಿಂದ ವರ್ಷಕ್ಕೆ ಕೋಟ್ಯಾಂತರ ರೂ. ಉಳಿತಾಯವಾಗಲಿದೆ.
ಪರಿಸರ ಮತ್ತು ಜಲಸಂರಕ್ಷಣೆ
ಗ್ರಾಮಗಳಲ್ಲಿ ಸರ್ಕಾರಿ ಜಾಗ ಮತ್ತು ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಕೆರೆಗಳು, ಕಲ್ಯಾಣಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದ್ದು. ರೀಚಾರ್ಜ್ ಸಹ ಮಾಡಲಾಗುತ್ತಿದೆ.
ಮಕ್ಕಳ ಸ್ನೇಹಿ ಅಂಗನವಾಡಿ
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ಬರೆಯಲಾಗಿದೆ.
ವಿಶೇಷವಾಗಿ ಮಕ್ಕಳಿಗೆ ಅರ್ಥವಾಗಲು ಸ್ಮಾರ್ಟ್ ಕ್ಲಾಸ್ ತೆರೆಯಲು ಉದ್ದೇಶಿದ್ದು, ಇದಕ್ಕೆ ಪೂರಕವಾಗಿ ಟಿ.ವಿ ಕಲಿಕಾ ಸಾಧನಗಳನ್ನು ವಿತರಿಸಲು ತಾ.ಪಂ. ಯೋಜಿಸಿದೆ.
ಸರ್ಮಪಕ ಮಾಡಿರುವ ಕಾರ್ಯಕ್ಕೆ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದು ಬೆಂಗಳೂರು ಪೂರ್ವ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ತಿಳಿಸಿದರು.