ಬೆಂಬಲ ಬೆಲೆ ಯೋಜನೆ:ಅಫಜಲಪುರದಲ್ಲಿ ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ

ಕಲಬುರಗಿ:ಡಿ.01:ಬೆಂಬಲ ಬೆಲೆ ಯೋಜನೆಯಡಿ ಅಫಜಲಪುರ ತಾಲೂಕಿನ ರೈತರಿಂದ ಹತ್ತಿ ಖರೀದಿಸಲು ಅನುಕೂಲವಾಗುವಂತೆ ಭಾರತೀಯ ಹತ್ತಿ ನಿಗಮದಿಂದ ಪ್ರಾರಂಭಿಸಲಾದ ಹತ್ತಿ ಖರೀದಿ ಕೇಂದ್ರಕ್ಕೆ ವೈಭವ ಕಾಟನ್ ಇಂಡಸ್ಟೀಸ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಶುಕ್ರವಾರ ಅಫಜಲಪುರ ತಹಸೀಲ್ದಾರರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಾಧಿಕಾರಿಗಳಾದ ಸಂಜೀವ ಕುಮಾರ ದಾಸರ ಅವರು ಚಾಲನೆ ನೀಡಿದರು.

ಅಫಜಲಪುರ ಶಾಸಕರಾದ ಎಂ.ವೈ.ಪಾಟೀಲ ಅವರು ದಿನಾಂಕ: 01-12-2023 ರಂದು ಖರೀದಿ ಕೇಂದ್ರಕ್ಕೆ ಚಾಲನೆ ನೀಡಲು ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಹತ್ತಿ ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಅಫಜಲಪೂರ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ತಾಲೂಕಿನಲ್ಲಿ ಹತ್ತಿ ಬೆಳೆದ ರೈತರಿಗೆ ಭಾರತೀಯ ಹತ್ತಿ ನಿಗಮದ ವತಿಯಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ (ಒSP) ಮೂರು ಸಂಖ್ಯೆ ಹತ್ತಿ ಖರೀದಿ ಕೇಂದ್ರಗಳಾದ ವೈಭವ ಕಾಟನ್ ಇಂಡಸ್ಟೀಸ್ ಜಿನ್ನಿಂಗ್ ಆಂಡ್ ಪ್ರೆಸ್ಸಿಂಗ್, ಪ್ಲಾಟ್ ನಂ.5-5-1154, ಸರ್ವೆ ನಂ. 5916/1, ಆಶ್ರಯ ಕಾಲೋನಿ, ದೇಸಾಯಿ ಕಲ್ಲೂರು ರಸ್ತೆ, ಅಫಜಲಪೂರ, ಕಿಸಾನ್ ಕಾಟನ್ ಇಂಡಸ್ಟ್ರೀಸ್, ಜಿನ್ನಿಂಗ್ ಆಂಡ್ ಪ್ರೆಸ್ಸಿಂಗ್, ಎನ್.ಎ.ಲ್ಯಾಂಡ್, ಸರ್ವೆ ನಂ. 61/9, ಕಲಬುರಗಿ ರಸ್ತೆ, ಮಾತೋಳಿ, ಅಫಜಲಪೂರ ಹಾಗೂ ಕರ್ನಾಟಕ ಕಾಟನ್ ಇಂಡಸ್ಟ್ರೀಸ್, ಜಿನ್ನಿಂಗ್ ಆಂಡ್ ಪ್ರೆಸ್ಸಿಂಗ್, ಆನೂರು ರಸ್ತೆ, ಅಫಜಲಪೂರ ಇಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಫಜಲಪೂರ ತಾಲೂಕಿನ ಹತ್ತಿ ಬೆಳೆದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

2023-24 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಪ್ರತಿ ಕ್ವಿಂಟಲ್‍ಗೆ (ಉದ್ದನೆಯ ಎಳೆ) 7,020 ರೂ. ಹಾಗೂ (ಮಧ್ಯಮ ಎಳೆ) 6,620 ರೂ. ಗಳಲ್ಲಿ ಹತ್ತಿಯನ್ನು ಖರೀದಿಸಲು ದರವನ್ನು ನಿಗದಿಪಡಿಸಲಾಗಿದೆ.
ಈ ಸಂಧರ್ಭದಲ್ಲಿ ಅಫಜಲಪೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಂತೋಷ ಬುಡಗೆ, ಸಿ.ಸಿ.ಐ. (ಅಅI) ಅಧಿಕಾರಿ ಅವಿನಾಶ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.