ಬೆಂಬಲ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಪ್ರತಿಭಟನೆ

ರಾಯಚೂರು,ಜ.೦೨- ಕಲ್ಯಾಣ ಕರ್ನಾಟಕ ಭಾಗದ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಮುಖಂಡರು ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿದರು. ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಬಿಜೆಪಿ ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಅವರು, ಹತ್ತಿ ಮತ್ತು ಮೆಣಸಿನಕಾಯಿ ಸೇರಿದಂತೆ ಇತರೇ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಪ್ರತಿಭಟಿಸಿದರು. ಅನಂತರ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಮಾತನಾಡಿ, ಬೆಳೆಗಾವಿ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆ ನಷ್ಟ ಕುರಿತು ಅಧಿವೇಶನದಲ್ಲಿ ಸ್ಥಳೀಯ ಮತ್ತು ಗ್ರಾಮೀಣ ಶಾಸಕರು ದ್ವನಿ ಎತ್ತದೆ ಮೌನವಹಿಸಿದ್ದು ಖಂಡಿನಿಯ, ಬಿಜೆಪಿ ಸರಕಾರ ರೈತರ ವಿರೋಧಿ ಸರಕಾರವಾಗಿದೆ ಎಂದು ಕಿಡಿಕಾಡಿದರು. ಕಳೆದ ದಿನಗಳಲ್ಲಿ ಸುರಿದ ಭಾರಿ ಮಳೆಯಿಂದ ಈ ಭಾಗದ ರೈತರ ಬೆಳದ ಬೆಳೆ ಸಂಪೂರ್ಣ ನಾಶವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಆಡಳಿತ ಸರಕಾರ ಮತ್ತು ಸ್ಥಳೀಯ ಹಾಗೂ ಗ್ರಾಮೀಣ ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹತ್ತಿ ಮತ್ತು ಮೆಣಸಿನಕಾಯಿ ಸೇರಿದಂತೆ ಇತರೇ ಬೆಳೆಗಳು ನಾಶವಾಗಿದ್ದು, ಸರಕಾರ ೬ ರಿಂದ ೭ ಸಾವಿರ ವರೆಗೆ ಬೆಲೆ ನಿಗದಿ ಪಡಿಸಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ ಅವರು ಬಿಜೆಪಿ ಸರಕಾರ ವಿರುದ್ಧ ಆಕ್ರೋಶ ಹೊರಹಾಕಿದರು. ಕಲ್ಯಾಣ ಕರ್ನಾಟಕ ಭಾಗವದ ಬೆಳೆಗಾವಿದಲ್ಲಿ ಅಧಿವೇಶನ ನಡೆದರು ಈ ಭಾಗದ ರೈತರ ಪರ ದ್ವನಿ ಎತ್ತದೇ ಮೌನವಹಿಸಿರುವುದು ಇರುವುದು ಖಂಡನಿಯ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಅಧಿವೇಶನಕ್ಕೆ ೧ ನೂರ ೬೦ ಕೋಟಿ ವೆಚ್ಚ ಖರ್ಚು ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದ ಮೂಲಭೂತ ಸೌಕರ್ಯ ಕೊರತೆ ಸೇರಿದಂತೆ ಇತರೇ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಸಿಲ್ಲ. ಸದನದಲ್ಲಿ ಕೇವಲ ಆಡಂಬರ ಕೆಲಸ ನೆಡದಿದೆ ಆಕ್ರೋಶ ವ್ಯಕ್ತಪಡಿಸಿದರು.
ಅಮಿತಾ ಶಾ ಕಾರ್ಯಕ್ರಮಕ್ಕೆ ಭಾಗಿಯಾಗಳು ಒಂದು ದಿನ ಮುಂಚಿತವೇ ಸದನವನ್ನು ಮುಕ್ತಾಯಗೊಳಿಸಿ ಸದನಕ್ಕೆ ಅಗೌರವ ತೋರಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ್ ಪಾಟೀಲ್ ಅತ್ತನೂರು, ನರಸಿಂಹಲು ನಾಯಕ್, ಎನ್ ಶಿವಶಂಕರ, ವಿಶ್ವಾನಾಥ್ ಪಟ್ಟಿ, ಕುಮಾರ ಸ್ವಾಮಿ, ನರಸಿಂಹಲು, ಸೇರಿದಂತೆ ಉಪಸ್ಥಿತರಿದ್ದರು.