ಬೆಂಬಲ ಬೆಲೆಯಲ್ಲಿ ಜೋಳ ಖರೀದಿಗೆ ಆಗ್ರಹ

ಶಿಗ್ಗಾವಿ,ಮಾ25 : ಕನಿಷ್ಟ ಬೆಂಬಲ ಬೆಲೆಯಲ್ಲಿ ಜೋಳ ಖರೀದಿಸುವಂತೆ ಆಗ್ರಹಿಸಿ ರೈತರು ಸಹಾಯಕ ಕೃಷಿ ನಿರ್ದೆಶಕ ಸುರೇಶ ದಕ್ಷೀತ್ ಅವರಿಗೆ ಸೋಮವಾರ ಮನವಿ ಅರ್ಪಿಸಿದರು.
ತಾಲೂಕಿನಲ್ಲಿ ಹಿಂಗಾರು ಜೋಳ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದ್ದು 2020-21 ಸೇ ಸಾಲಿನ ಹಿಂಗಾರಿನಲ್ಲಿ 4240 ಹೆಕ್ಟರ ಪ್ರದೇಶ ಭಿತ್ತನೆಯಾಗಿದೆ, ಜೋಳ ಬಿತ್ತನೆಗೆ ಸೆಪ್ಟಂಬರ 15 ರಿಂದ ಅಕ್ಟೋಬರ 15 ರವರೆಗೆ ಸೂಕ್ತವಾಗಿದ್ದು ಅಧಿಕವಾಗಿ ಅಕ್ಟೋಬರ ಮೊದಲ ವಾರದಲ್ಲಿ ಬಿತ್ತನೆಯಾಗಿದೆ 115 ರಿಂದ 120 ದಿನಗಳ ಅವಧಿಯಲ್ಲಿ ಮುಕ್ತಾಯಗೊಳ್ಳುವ ಬೆಳೆಯಾಗಿದ್ದು ಜನೆವರಿ 15 ರಿಂದ ಫೆಬ್ರುವರಿ 15ರ ವರಗೆ ಕಟಾವಾಗಲು ಸಿದ್ದವಾಗಿರುತ್ತದೆ ಜನೆವರಿ ಮೊದಲನೆಯ ವಾರ ಹಾಲುಕಟ್ಟುವ ಹಂತವಾಗಿದ್ದು ಜನೆವರಿ 28 ಮತ್ತು 29 ರಂದು ಸುರಿದ ಅಕಾಲಿಕ ಮಳೆಯಿಂದ ವಾತಾವರಣದಲ್ಲಿ ತೆವಾಂಶ ಹೆಚ್ಚಾಗಿ ಜೋಳದ ಕಾಳುಗಳಲ್ಲಿ ಬೂಷ್ಟರೋಗ ಕಂಡು ಬಂದಿದೆ ಕಾಳುಗಳು ಕಪ್ಪು ಬಣ್ಣಕ್ಕೆ ಬಂದಿವೆ ಬೆಂಬಲ ಬೆಲೆ ಯೋಜನೆಯಲ್ಲಿ ರೈತರ ಜೋಳ ಏಫ್ ಏ ಕ್ಯೋ ಗುಣಮಟ್ಟಕ್ಕೆ ತೃಪ್ತಿಕರವಾಗಿರುವದಿಲ್ಲ ಆದರಿಂದ ಮಾನದಂಡಗಳಲ್ಲಿ ಸಡಲಿಕೆ ಮಾಡಿ, ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ವಹಿಸಿ ಜೋಳ ಖರೀದಿ ಮಾಡಿಕೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಮುಖಂಡರಾದ ಸಂತೋಷ ಕಟಗಿ, ಸುರೇಶ ಹುಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.