ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಗೆಷರತ್ತು ವಿಧಿಸಿರುವ ಕ್ರಮ ಖಂಡಿಸಿ ರೈತರ ಪ್ರತಿಭಟನೆ

ಚಾಮರಾಜನಗರ, ಜೂ.19:- ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಗೆಷರತ್ತು ವಿಧಿಸಿರುವ ಕ್ರಮ ಖಂಡಿಸಿ ರೈತರು ಮತ್ತುರಾಜ್ಯ ಅರಿಶಿಣ ಬೆಳೆಗಾರರ ಸಂಘಟನೆ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿತಡೆದು ಭಾನುವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಗುಂಡ್ಲುಪೇಟೆಪಟ್ಟಣದ ಹೊರ ವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 766-ರಲ್ಲಿ ರಸ್ತೆತಡೆದರೈತ ಮುಖಂಡರು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಅರಿಶಿಣ ಬೆಳೆಗಾರರ ರಾಜ್ಯ ಸಂಘಟನೆ ಸಂಚಾಲಕ ನಾಗಾರ್ಜುನಕುಮಾರ್ ಮಾತನಾಡಿ, ಕೇಂದ್ರ ಕೃಷಿ ಸಚಿವಾಲಯರಾಜ್ಯ ಸಹಕಾರ ಇಲಾಖೆಗೆ ಖರೀದಿ ಕೇಂದ್ರತೆರೆಯುವಂತೆ ನೀಡಿದ್ದಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಜೂ.12ರಂದು ರೈತರು ಮತ್ತು ಅರಿಶಿಣ ಬೆಳೆಗಾರರ ಸಂಘಟನೆ ಪದಾಧಿಕಾರಿಗಳು ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ರೈತರೊಂದಿಗೆ ಚರ್ಚಿಸಿದ್ದ ಶಾಸಕ ಎಚ್.ಎಂ.ಗಣೇಶ್À್ರಸಾದ್‍ಕೂಡಖರೀದಿ ಕೇಂದ್ರತೆರೆಯುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜೂ.18 ರಂದುಖರೀದಿ ಕೇಂದ್ರತೆರೆಯುವ ಭರವಸೆ ಸಿಕ್ಕಿತ್ತು. ಆದರೂಕೂಡಖರೀದಿಗೆ ಮುಂದಾಗಿಲ್ಲಎಂದುಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಅರಿಶಿಣ ಬೆಳೆಗಾರರ ಸಂಘಟನೆ ನೀಡಿದ್ದ ಪ್ರಕಟಣೆಯಂತೆ ಪಾಲಿಶ್ ಮಾಡಿದ ಅರಿಶಿಣವನ್ನು 50 ಕೆ.ಜಿತೂಕದಚೀಲದಲ್ಲಿ ತುಂಬಿಸಿಕೊಂಡು ರೈತರು ಮಾರಾಟಕ್ಕೆತಂದಿದ್ದಾರೆ. ಆದರೆಖರೀದಿ ಕೇಂದ್ರದಲ್ಲಿ ಪಾಲಿಸ್ ಮಾಡಿದ್ದರೂಗುಂಡು ಅರಿಶಿಣ ಖರೀದಿಸುವುದಿಲ್ಲ ಎಂದುಷರತ್ತು ಹಾಕಲಾಗಿದೆಎಂದುಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಅರಿಶಿಣ ತುಂಬಿದಟ್ರ್ಯಾಕ್ಟರ್‍ಇತರೆ ವಾಹನಗಳು ಪ್ರಾಂಗಣದಲ್ಲಿ ಸಾಲುಗಟ್ಟಿ ನಿಂತಿದ್ದವು. ಹೆದ್ದಾರಿರಸ್ತೆತಡೆ ನಡೆಸಿದ ಪರಿಣಾಮ ಕೆಲಕಾಲ ಟ್ರಾಫಿಕ್‍ಜಾಮ್‍ಉಂಟಾಗಿತ್ತು. ಇದರಿಂದ ಸರಕು ಸಾಗಣೆ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಕೃಷಿ ಸಹಾಯಕ ನಿರ್ದೇಶಕ ಸಂತೋμï ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾಜು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನ ಪಟ್ಟರುಕೂಡರೈತರು ಬಗ್ಗಲಿಲ್ಲ. ಪಿಎಸ್‍ಐ ಕಿರಣ್‍ರ ನೇತೃತ್ವದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್‍ಏರ್ಪಡಿಸಲಾಗಿತ್ತು.
ಪ್ರತಿಭಟನೆಯಲ್ಲಿರೈತ ಮುಖಂಡಕುಂದಕೆರೆ ಸಂಪತ್ತು ಸೇರಿದಂತೆ 80ಕ್ಕೂ ಅಧಿಕರೈತ ಮುಖಂಡರು, ಅರಿಶಿಣ ಬೆಳೆಗಾರರು ರೈತರು ಹಾಜರಿದ್ದರು.