ಬೆಂಡೆಕಾಯಿ ಫ್ರೈ

ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ – ೧೦
ಜೀರಿಗೆ – ಅರ್ಧ ಚಮಚ
ಅರಿಶಿನ – ಅರ್ಧ ಚಮಚ
ಧನಿಯಾಪುಡಿ – ೨ ಚಮಚ
ಇಂಗಿನಪುಡಿ – ಅರ್ಧ ಚಮಚ
ಜೀರಿಗೆಪುಡಿ – ಅರ್ಧ ಚಮಚ
ಉಪ್ಪು – ೧ ಚಮಚ
ಅಚ್ಚಖಾರದಪುಡಿ – ೧ ಚಮಚ
ಕಾಯಿತುರಿ – ೨ ಚಮಚ
ಮೊಸರು – ಅರ್ಧ ಲೋಟ

ವಿಧಾನ: ಬೆಂಡೆಕಾಯಿಯನ್ನು ಇಡಿಯಾಗಿಯೇ ಎಣ್ಣೆಯಲ್ಲಿ ಕರಿಯಬೇಕು. ಅದೇ ಬಿಸಿಎಣ್ಣೆಗೆ ಸ್ವಲ್ಪಕ್ಕೆ ಜೀರಿಗೆ, ಅರಿಶಿನ, ಧನಿಯಾಪುಡಿ, ಇಂಗು, ಜೀರಿಗೆಪುಡಿ, ಉಪ್ಪು, ಅಚ್ಚಖಾರದಪುಡಿ ಹಾಕಿ ಕುದಿಸಿ. ಕರಿದ ಬೆಂಡೆಕಾಯಿ, ಕಾಯಿತುರಿ ಹಾಕಿ ಕುದಿಸಿ ಇಳಿಸಿ, ಮೊಸರು ಹಾಕಿ ೧೫ ನಿಮಿಷ ನೆನೆಸಿ ಸೇವಿಸಬಹುದು.