ಬೆಂಚ್ ಕಾರು ಡಿಕ್ಕಿ ಸರಣಿ ಅಪಘಾತ ಓರ್ವ ಸಾವು ಮತ್ತೊಬ್ಬ ಗಂಭೀರ

ಬೆಂಗಳೂರು,ಡಿ.7- ವೇಗವಾಗಿಬಂದ ಐಷಾರಾಮಿ ಬೆಂಜ್ ಕಾರು ಮುಂದೆ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ದಾರುಣ ಘಟನೆ ಹಲಸೂರು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿದ್ದು ಗಾಯಗೊಂಡ ನಾಲ್ವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಲಾಗಿದೆ ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಇಂದಿರಾನಗರ 80ನೇ ಅಡಿ ರಸ್ತೆಯಲ್ಲಿ ಬರುವ ತಿಪ್ಪಸಂದ್ರ ಬಳಿ ಮಧ್ಯಾಹ್ನ 3.40ರ
ವೇಳೆ ವೇಗವಾಗಿ ಬೆಂಜ್ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ಹೊಡೆದ ಪರಿಣಾಮ ಮುಂದಿನ ಎರಡು ಆಟೋ ಹಾಗೂ ಒಂದು‌ ಮಿನಿ ಲಾರಿ ಮಧ್ಯೆ ಅಪಘಾತವಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ‌.ಬೆಂಜ್ ಕಾರು ವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಇದು ನಂದಿತಾ ಚೌದ್ರಿ ಎಂಬುವರಿಗೆ ಸೇರಿದ ಕಾರು ಎಂದು ಗೊತ್ತಾಗಿದೆ. ಹಲಸೂರು ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.