ಬೆಂಗಾಲಿ ಸೂಪರ್ ಸ್ಟಾರ್ ಸೌಮಿತ್ರ‌ ಚಟರ್ಜಿ ನಿಧನ: ಪ್ರಧಾನಿ‌ ಸೇರಿ ಗಣ್ಯರ ಸಂತಾಪ

ನವದೆಹಲಿ, ನ.15- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಬಂಗಾಳಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಸೌಮಿತ್ರ ಚಟರ್ಜಿ ಇಂದು ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ತನ್ನ 23 ನೇ ವಯಸ್ಸಿನಲ್ಲಿ 1958 ರಲ್ಲಿ” ಆ ಪೂರ್ ಸನ್ ಸರ್ ” ಚಿತ್ರದ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿ ಸೌಮಿತ್ರ ಚಟರ್ಜಿಯವರು ಬಂಗಾಳಿ ಚಿತ್ರರಂಗದಲ್ಲಿ ಅತಿ ದೊಡ್ಡ ಹೆಸರು ಮಾಡಿದ್ದರು.

ಕಳೆದ ಕೆಲ ವಾರಗಳಿಂದ ಕೊರೊನಾ ಸೋಂಕು ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಸತ್ಯಜಿತ್ ರೇ ಅವರ ಅನೇಕ ಚಿತ್ರಗಳಲ್ಲಿ ಸೌಮಿತ್ರ ಚಟರ್ಜಿ ಕಾಣಿಸಿಕೊಂಡು ಬಂಗಾಳಿ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನೀಡಿದ್ದರು. ಸರಿಸುಮಾರು 14ಕ್ಕೂ ಹೆಚ್ಚು ಚಿತ್ರಗಳನ್ನು ಸತ್ಯ ಜಿತ್ ರೇ ಅವರು ಚಟರ್ಜಿಯವರಿಗೆ ನಿರ್ದೇಶನ ಮಾಡಿದ್ದರು.

ಬೆಂಗಾಲಿ ಚಿತ್ರರಂಗದ ಖ್ಯಾತ ನಾಯಕ ನಟರಾದ ಮೃಣಾಲ್ ಸೇನ್, ತಪನ್ ಸಿನ್ಹಾ, ಅಜಯ್ ಕರ್ ಸೇರಿದಂತೆ ಅನೇಕ ನಟರ ಜೊತೆ 1980 ರ ದಶಕದಲ್ಲಿ ಯಶಸ್ವಿ ಚಿತ್ರ ನೀಡಿದ್ದರು.

ಪ್ರಶಸ್ತಿ ವಿವರ:
ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2012ರಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸೌಮಿತ್ರ ಚಟರ್ಜಿಯವರಿಗೆ ನೀಡಲಾಗಿತ್ತು.

2004 ರಲ್ಲಿ ಪದ್ಮವಿಭೂಷಣ, ಪ್ರಶಸ್ತಿಯು ಬಂದಿತ್ತು. ಇದಕ್ಕೂ ಮುನ್ನ ಎರಡು ಬಾರಿ ಪದ್ಮ ಪ್ರಶಸ್ತಿಗಳನ್ನು ಸೌಮಿತ್ರ ಚಟರ್ಜಿಯವರು ತಿರಸ್ಕರಿಸಿದ್ದರು. ಅದಕ್ಕೆ ಕಾರಣ ಪ್ರಶಸ್ತಿಯನ್ನು ತಡವಾಗಿ ಪ್ರಕಟ ಮಾಡಿದ್ದಿದೆ ಅವರ ತಿರಸ್ಕಾರಕ್ಕೆ ಕಾರಣವಾಗಿತ್ತು.

2018ರಲ್ಲಿ ಪ್ರಾನ್ಸ್ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿತ್ತು .

ಪ್ರದಾನಿ ಸಂತಾಪ:
ಬಂಗಾರಿ ಚಿತ್ರಾಂಗದ ಸೂಪರ್ಸ್ಟಾರ್ ಸೌಮಿತ್ರ ಚಟರ್ಜಿಯವರ ನಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಬೆಂಗಾಲಿ ಚಿತ್ರರಂಗದ ನಟರು ನಿರ್ದೇಶಕರು ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ