ಬೆಂಗಳೂರು ಸೇರಿ ದೇಶದ 10 ಜಿಲ್ಲೆಗಳಲ್ಲಿ ಸೋಂಕು ಗಣನೀಯ ಏರಿಕೆ

ನವದೆಹಲಿ, ಮಾ.30- ದೇಶದ 10 ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಏರಿಕೆಯಾಗಿದೆ. ಹತ್ತರಲ್ಲಿ ಎಂಟು ಜಿಲ್ಲೆಗಳು ಮಹಾರಾಷ್ಟ್ರದಲ್ಲಿ ಇರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಬೆಂಗಳೂರು ನಗರ, ದೆಹಲಿ, ಒಳಗೊಂಡಂತೆ ಮಹಾರಾಷ್ಟ್ರದ, ಪುಣೆ,ನಾಗ್ಪುರ, ಮುಂಬೈ, ಥಾಣೆ, ನಾಶಿಕ್, ಔರಂಗಾಬಾದ್,ನಾಂದೇಡ್, ಅಹಮದ್ ನಗರ 8 ಜಿಲ್ಲೆಗಳು ಮಹಾರಾಷ್ಟ್ರ ಒಂದರಲ್ಲೇ ಹೆಚ್ಚು ಕಾಣಿಸಿಕೊಂಡಿದ್ದು ಇದು ಆತಂಕಕಾರಿ ಸಂಗತಿ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಪುಣೆ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಎಂಟು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಮಹಾರಾಷ್ಟ್ರ ಸರ್ಕಾರವನ್ನು ಜೊತೆಗೆ ಕೇಂದ್ರಸರ್ಕಾರವನ್ನು ಹೆಚ್ಚು ಆತಂಕಕ್ಕೆ ದೂಡಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಸರಾಸರಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ ಒಂದು ವಾರದಲ್ಲಿ ಶೇಕಡ 5.65ರಷ್ಟು ಮಹಾರಾಷ್ಟ್ರದಲ್ಲಿ ಸಂಖ್ಯೆ 23 ಎಷ್ಟಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳ ಇಂದ ಈಚೆಗೆ ಮಹಾರಾಷ್ಟ್ರದಲ್ಲಿ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿರುವುದು ಸಹಜವಾಗಿಯೇ ಕೇಂದ್ರಸರ್ಕಾರವನ್ನು ಮತ್ತಷ್ಟು ಚಿಂತೆಗೆ ಗುರಿಮಾಡಿತು ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ವಾರದ ಸರಾಸರಿ ಸೋಂಕು ಪ್ರಕರಣ ಶೇಕಡ 23 ರಷ್ಟಿದೆ. ಪಂಜಾಬ್ ನಲ್ಲಿ ಶೇಕಡ 8.82 ರಷ್ಟು, ಛತ್ತೀಸ್ ಗಡದಲ್ಲಿ ಶೇಕಡ ಎಂಟರಷ್ಟು,
ಮಧ್ಯಪ್ರದೇಶದಲ್ಲಿ ಶೇಕಡಾ 7.28,, ತಮಿಳುನಾಡಿನಲ್ಲಿ ಶೇಕಡ 2.50 ಕರ್ನಾಟಕದಲ್ಲಿ ಶೇಕಡ 2.45, ಗುಜರಾತ್ ನಲ್ಲಿ ಶೇಕಡ 2.20, ದೆಹಲಿಯಲ್ಲಿ ಪ್ರಮಾಣ ಶೇಕಡ 2.0 4ರಷ್ಟು ಇದೆ ಎಂದು ಅವರು ತಿಳಿಸಿದ್ದಾರೆ..

ಮನವಿ ಮಾಡಿಲ್ಲ:

ಮಹಾರಾಷ್ಟ್ರದಲ್ಲಿ ಕೊರೋನೋ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಮನೆಮನೆಗೆ ಲಸಿಕೆ ಹಾಕಲು ಅನುಮತಿ ಕೇಳಿದೆ ಎನ್ನುವ ವರದಿ ಸತ್ಯಕ್ಕೆ ದೂರವಾದುದು ಎಂದು ಅವರು ತಿಳಿಸಿದ್ದಾರೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆ ಇದುವರೆಗೂ ಈ ರೀತಿಯ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿಲ್ಲ ಒಂದು ವೇಳೆ ಈ ರೀತಿಯ ಪ್ರಸ್ತಾವನೆಗಳನ್ನು ಇಟ್ಟರೆ ಆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಈಗಾಗಲೇ ಸಾರ್ವತ್ರಿಕವಾಗಿ ಲಸಿಕೆ ಹಾಕುವ ಅಭಿಯಾನ ಎರಡು ಹಂತದಲ್ಲಿ ಜಾರಿಯಲ್ಲಿದೆ ಇದರ ಜೊತೆಗೆ ಏಪ್ರಿಲ್ ಒಂದರಿಂದ ನಲವತ್ತೈದು ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಅವರು ತಿಳಿಸಿದರು