ಬೆಂಗಳೂರು ಸೇರಿ ದೇಶದ 10 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಹೆಚ್ಚು: ಆತಂಕ

ನವದೆಹಲಿ, ಏ. 6-ಬೆಂಗಳೂರು ಸೇರಿದಂತೆ ದೇಶದ. ಹತ್ತು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಸಕ್ರಿಯ ಪ್ರಕರಣ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ‌.

ದೇಶದ 10 ಜಿಲ್ಲೆಗಳ ಪೈಕಿ ಮಹಾರಾಷ್ಟ್ರ ದಲ್ಲಿ 7 ,ಕರ್ನಾಟಕ, ,ಛತ್ತೀಸ್ ಘಡ ಮತ್ತು ಗಹಲಿಯ ಒಂದು ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ ಹೆಚ್ಚಿನ ಮಂದಿ ಕೊರೋನೊ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು‌

ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಸಕ್ರಿಯ ಪ್ರಕರಗಳ ಪೈಕಿ ಮಹಾರಾಷ್ಟ್ರ ಒಂದರಲ್ಲಿ 58 ರಷ್ಟು ಸಕ್ರಿಯ ಪ್ರಕರಣಗಳು ಮತ್ತು ಶೇ.34 ರಷ್ಟು ಸಾವಿನ ಪ್ರಕರಣ ವರದಿಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ ‌

ಆರ್ ಟಿ ಪಿಸಿ ಆರ್ ಪರೀಕ್ಷೆ ಗೆ ಸೂಚನೆ

ದೇಶದಲ್ಲಿ ಕೊರೋನಾ ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಪ್ರಮಾಣವನ್ನು ಹೆಚ್ಚು ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವಾರಗಳಿಂದ ಆರ್ ಟಿಪಿಎಸಿಆರ್ ಪರೀಕ್ಷೆ ಪ್ರಮಾಣವನ್ನು ಕಡಿಮೆ ಮಾಡಿದೆ‌ .ಸದ್ಯ ಅಲ್ಲಿ ಶೇಕಡ 60ರಷ್ಟು ಮಾತ್ರ ಪರೀಕ್ಷೆ ಮಾಡಲಾಗುತ್ತದೆ.ಈ ಪ್ರಮಾಣವನ್ನು ಶೇಕಡಾ 70 ಕ್ಕೂ ಹೆಚ್ಚು ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು

ಕಳವಳ:

ಛತ್ತೀಸ್ ಗಡದಲ್ಲಿ ಶೇ. 6 ರಷ್ಟು ಕೋವಿಡ್ ಪ್ರಕರಣ ಮತ್ತು ಶೇ.3 ರಷ್ಟು ಸಾವಿನ ಪ್ರಕರಣ ದಾಖಲಾಗುತ್ತಿರುವುದು ಆತಂಕದ ಸಂಗತಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಛತ್ತೀಸ್ ಗಡದಲ್ಲಿ ಎರಡನೇ ಹಂತದ ಅಲೆ ವ್ಯಾಪಕವಾಗಿ ಕಾಣಿಸಿಳ್ಳುತ್ತಿದೆ. ಈ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತಡ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪಂಜಾಬ್ ನಲ್ಲಿ ಶೇ.4.5 ರಷ್ಟು ಮಂದಿ ಸೋಂಕಿನಿಂದ ಮೃತಪಡುತ್ತಿದ್ದಾರೆ. ಪಂಜಾಬ್ ಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಕ್ರಿಯ ಪ್ರಕರಣ ಮತ್ತು ಸಾವಿನ ಪ್ರಕಾರಗಳು ತೀರಾ ಕಡಿಮೆಯೇ ಎಂದು ಅವರು ಹೇಳಿದ್ದಾರೆ.