ಬೆಂಗಳೂರು ಸಾವಿನ ಸಂಖ್ಯೆ ಶೂನ್ಯ: ಗದಗದಲ್ಲಿ ಸೋಂಕು ಗಣನೀಯ ಹೆಚ್ಚಳ

ಬೆಂಗಳೂರು, ನ.25–ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು ಸಾವಿನ ಸಂಖ್ಯೆ ಇಳಿಕೆಯಾಗಿದೆ. ಜೊತೆಗೆ ಚೇತರಿಕೆ ಪ್ರಮಾಣ ಕುಸಿದಿದೆ.

ಬೆಂಗಳೂರಿನಲ್ಲಿ ಸೋಂಕಿನಿಂದ ಇಂದು ಯಾರೊಬ್ಬರೂ ಸಾವನ್ನಪ್ಪಿಲ್ಲ. ಕಳೆದ ಹಲವು ದಿನಗಳಿ ಒಂದು,ಎರಡು ಶೂನ್ಯದಲ್ಲಿ ಪ್ರಕರಣ ದಾಖಲಾಗುತ್ತಿದ್ದ ಗದಗದಲ್ಲಿ 42 ಮಂದಿಯಲ್ಲಿ ಸೋಂಕು ಹೆಚ್ಚಳವಾಗಿದೆ.

ರಾಜ್ಯದಲ್ಲಿ ಇಂದು 306 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 2 ಸೋಂಕಿತರು ಸಾವನ್ನಪ್ಪಿದ್ದು. ಈ ಅವಧಿಯಲ್ಲಿ 224 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರಾಜ್ಯದ ಬಾಗಲಕೋಟೆ, ಬಳ್ಳಾರಿ, ಬೀದರ್,ಗದಗ , ಕಲಬುರಗಿ,ಕೊಪ್ಪಳ, ರಾಯಚೂರು, ಮತ್ತು ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಂಖ್ಯೆ ಪತ್ತೆಯಾಗಿಲ್ಲ.

ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು 171 ಮಂದಿಗೆ ಇಳಿಕೆಯಾಗಿದೆ. 147 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.ಇಂದು ಯಾರೂ ಕೂಡ ಸಾವನ್ನಪ್ಪಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,94,561 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,49,853 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38187 ಕ್ಕೆ ಏರಿಕೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 6,492 ಕ್ಕೆ ಕುಸಿದಿದೆ.

ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರಮಾಣ ಶೇ.0.65 ಕ್ಕೆ ಇಳಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0.36 ರಷ್ಟು ಇದೆ.

84 ಸಾವಿರ ಪರೀಕ್ಷೆ:

ರಾಜ್ಯದಲ್ಲಿ ಇಂದು 84,513 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,29,31,905 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 0
  • ಬಳ್ಳಾರಿ – 0
  • ಬೆಳಗಾವಿ – 5
  • ಬೆಂಗಳೂರು ಗ್ರಾಮಾಂತರ- 1
  • ಬೆಂಗಳೂರು ನಗರ. – 171
  • ಬೀದರ್ 0
  • ಚಾಮರಾಜನಗರ- 2
  • ಚಿಕ್ಕಬಳ್ಳಾಪುರ- 1
  • ಚಿಕ್ಕಮಗಳೂರು- 2
  • ಚಿತ್ರದುರ್ಗ- 6
  • ದಕ್ಷಿಣ ಕನ್ನಡ – 13
  • ದಾವಣಗೆರೆ- 1
  • ಧಾರವಾಡ- 42
  • ಗದಗ- 0
  • ಹಾಸನ- 5
  • ಹಾವೇರಿ- 1
  • ಕಲಬುರಗಿ- 0
  • ಕೊಡಗು- 4
  • ಕೋಲಾರ- 2
  • ಕೊಪ್ಪಳ- 0
  • ಮಂಡ್ಯ- 3
  • ಮೈಸೂರು- 20
  • ರಾಯಚೂರು- 0
  • ರಾಮನಗರ – 1
  • ಶಿವಮೊಗ್ಗ- 3
  • ತುಮಕೂರು- 18
  • ಉಡುಪಿ- 1
  • ಉತ್ತರ ಕನ್ನಡ- 5
  • ವಿಜಯಪುರ – 0
  • ಯಾದಗಿರಿ- 1