ಬೆಂಗಳೂರು ಶಿಕ್ಷಕರ ಕ್ಷೇತ್ರ ಬಿಜೆಪಿ ಜಯಭೇರಿ


ಬೆಂಗಳೂರು ನ.10: ಒಂದೆಡೆ ಶಿರಾ ಹಾಗೂ ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಭರ್ಜರಿ ಗೆಲುವನ್ನು ಸಾಧಿಸಿದ್ದರೇ, ಮತ್ತೊಂದೆಡೆ ಇಂದು ಮತಏಣಿಕೆ ನಡೆಸಲಾದಂತ ವಿಧಾನಪರಿಷತ್ತಿನ  ಶಿಕ್ಷಕರ ಕ್ಷೇತ್ರದ  ಚುನಾವಣೆಯಲ್ಲಿ ಪುಟ್ಟಣ್ಣ ಸತತ ನಾಲ್ಕನೆ ಬಾರಿ ಗೆಲುವು ಸಾಧಿಸಿದ್ದಾರೆ.
ಇಂದು ಶಿರಾ ಹಾಗೂ ರಾಜರಾಜೇಶ್ವರಿನಗರ ಉಪ ಚುನಾವಣೆಯ ಮತಏಣಿಕೆ ಜೊತೆಗೆ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರ ಕ್ಷೇತ್ರಗಳ ವಿಧಾನಪರಿಷತ್ ಸ್ಥಾನಗಳಿಗೆ ನಡೆದಂತ ಚುನಾವಣೆಯ ಮತಏಣಿಕೆ ಕೂಡ ನಡೆಯಿತು. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಂತ ಪುಟ್ಟಣ್ಣ ಅವರು ಗೆಲುವನ್ನು ಸಾಧಿಸಿದ್ದಾರೆ.
2200 ಮತಗಳ ಅಂತರದಿಂದ ಪುಟ್ಟಣ್ಣ ಗೆಲುವು ಕಂಡಿದ್ದಾರೆ. ಈ ಹಿಂದೆ ಮೂರು ಬಾರಿ ಪುಟ್ಟಣ್ಣ ಜೆಡಿಎಸ್ ನಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. ಇದೀಗ ನಾಲ್ಕನೇ ಬಾರಿ ಬಿಜೆಪಿಯಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಪುಟ್ಟಣ್ಣ ಸ್ಪರ್ಧಿಸಿದ್ದರು. ಇಂತಹ ಪುಟ್ಟಣ್ಣ ಅವರು ಜಯಭೇರಿ ಬಾರಿಸಿದ್ದಾರೆ. .