ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಶೋಕ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಭೆ

ಮೈಸೂರು, ನ.10: ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಇತ್ತೀಚಿಗೆ ನಿಧನರಾದ ಪೆÇ್ರಫೆಸರ್ ಅಶೋಕ್ ಕುಮಾರ್ ಅವರಿಗೆ ಮಾನಸಗಂಗೋತ್ರಿಯ ಗಾಂಧಿಭವನದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯ ಅಧ್ಯಕ್ಷ ಕೆಎಸ್ ಶಿವರಾಮ ರವರು ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿ ತಮ್ಮ ನಿಸ್ಪೃಹವಾದ ಕೆಲಸ ಕಾರ್ಯಗಳಿಂದ ಜ್ಞಾನ ಲೋಕಕ್ಕೆ ಅಪಾರ ಕೊಡುಗೆ ನೀಡಿರುವುದಲ್ಲದೆ ಅಪಾರ ವಿದ್ಯಾರ್ಥಿ ಮತ್ತು ಬಂಧುಗಳನ್ನು ಸಂಪಾದಿಸಿದ್ದಂತಹ ಶ್ರೀಯುತ ಅಶೋಕ್ ರವರ ನಿಧನ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಎಂದರು. ಹಾಗೆಯೆ ಅವರ ಸಾವಿನ ಬಗ್ಗೆ ಎದ್ದಿರುವ ಊಹಾಪೆÇೀಹಗಳ ಬಗ್ಗೆ ಪಾರದರ್ಶಕವಾದ ತನಿಖೆ ನಡೆಸಿ ಸತ್ಯಹೊರಹಚ್ಚ ಬೇಕೆಂದರು. ವಿಶ್ವವಿದ್ಯಾಲಯಗಳಿಗೆ ಜ್ಞಾನ ವಿದ್ಯಾರ್ಹತೆ ಮತ್ತೆ ವೃತ್ತಿಪರತೆಯ ಆಧಾರದ ಮೇಲೆ ಕುಲಪತಿ,ಕುಲಸಚಿವರ ನೇಮಿಸಬೇಕೆ ಹೊರತು ಹಣ ಜಾತಿಯ ಆಧಾರದ ಮೇಲೆ ಅಧಿಕಾರಿಗಳ ನೇಮಕ ಮಾಡಬಾರದೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಾರತೀಯ ದಲಿತ ಸಾಹಿತ್ಯ ವೇದಿಕೆಯ ರಾಜ್ಯ ಅಧ್ಯಕ್ಷರಾದ ಡಾ. ಸಿ. ವೆಂಕಟೇಶ್,ಸಿ ಟಿ ಆಚಾರ್ಯ, ಲೋಕೇಶ್ ಆರ್ ಕೆ ರವಿ ಸುನೀಲ್ ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸ್ಲೆ ನಟರಾಜ್ ಶಿವಣ್ಣ,ಹರೀಶ್, ಪ್ರತಾಪ್ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂದೇಶ್ ,ಕಾರ್ತಿಕ್ ಮಾದೇಶ ಗೋಪಾಲ್ ಪ್ರಕಾಶ್ ಚೇತನ್ ಮುಂತಾದವರು ಭಾಗವಹಿಸಿದ್ದರು