ಬೆಂಗಳೂರು ಟೆಕ್ ಸಮಿತಿ ನಾಡಿದ್ದು ಪ್ರಧಾನಿ ಉದ್ಘಾಟನೆ

ಬೆಂಗಳೂರು, ನ. 17- ಬೆಂಗಳೂರು ಟೆಕ್ ಸಮಿತಿ 2020 ನಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.

ರಾಜ್ಯ ಸರ್ಕಾರದ ಸಹಯೋಗದಲ್ಲಿ ವಿವಿಧ ಸಂಸ್ಥೆಗಳು ಆಯೋಜಿಸಿರುವ ಸಮಾವೇಶವನ್ನು ನಾಡಿದ್ದು ಮಧ್ಯಾಹ್ನ 12ಗಂಟೆಗೆ ಆನ್ಲೈನ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾರ್ಟ್ ಮಾರಿಸನ್, ಸ್ವಿಸ್ ಕಾರ್ಪೊರೇಷನ್ ಉಪಾಧ್ಯಕ್ಷ ಗೇ ಪರ್ಮಲಿನ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಗಣ್ಯಾತಿಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಕೊರೊನಾ ಸೋಂಕು ಮತ್ತು ನಂತರದ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸುವ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

ಸಮಿತಿ ಸಭೆಯಲ್ಲಿ ಸಂಶೋಧಕರು ಆವಿಷ್ಕಾರಗಳು ಸೇರಿದಂತೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರು ಭಾಗವಹಿಸಲಿದ್ದಾರೆ