ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಹೆದ್ದಾರಿ: ಮುಂದಿನ ವರ್ಷ ಮಾರ್ಚ್ ಅಂತ್ಯಕ್ಕೆ ಸಿದ್ದ: ಗಡ್ಕರಿ

ಬೆಂಗಳೂರು,ಮಾ.12- ಸರಿ ಸುಮಾರು 17 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್‍ವೇ ರಿಂಗ್ ರಸ್ತೆ ಸಮುಂದಿನ ವರ್ಷ ಮಾರ್ಚ್ ಅಂತ್ಯಕ್ಕೆ ಸಿದ್ಧವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರು-ಮೈಸೂರು ವಿಭಾಗದಲ್ಲಿ, 52ಕಿಮೀ ಗ್ರೀನ್‍ಫೀಲ್ಡ್ ಜೋಡಣೆ ಯೋಜನೆಯ ಭಾಗವಾಗಿದೆ. ಈ ಯೋಜನೆಯ ವೆಚ್ಚ 9,000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್‍ವೇಗೆ 285.3 ಕಿಮೀ ನಾಲ್ಕುಪಥದ ಯೋಜನೆ ಆರಂಭದಿಂದ ಪ್ರಯಾಣದ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಪ್ರಮುಖ ಪಟ್ಟಣಗಳು ಮತ್ತು ದಟ್ಟಣೆಯ ಪ್ರದೇಶಗಳಲ್ಲಿ ಹಾದುಹೋಗುವಲ್ಲಿ ವಿಳಂಬ ತಪ್ಪಿಸಲಿದೆ ಎಂದಿದ್ದಾರೆ.

“ಕರ್ನಾಟಕದಲ್ಲಿ 71.7 ಕಿಮೀ ವ್ಯಾಪ್ತಿಯ ಭಾರತಮಾಲಾ ಯೋಜನೆಗೆ 5,069 ಕೋಟಿ ವೆಚ್ಚವಾಗಲಿದೆ” ಎಂದು ಹೇಳಿದ ಅವರು
“ಈ ರಸ್ತೆ ನಿರ್ಮಾಣದಿಂದ ಸರಕು ಸಾಗಾಣೆ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ. 231 ಕಿಮೀ ನಿರ್ಮಾಣ ಮಾರ್ಚ್ 2024 ರೊಳಗೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ಬೆಂಗಳೂರು-ಮೈಸೂರು ಕಾರಿಡಾರ್ 10ಪಥದ ಯೋಜನೆಯಾಗಿದ್ದು, ಇದರಲ್ಲಿ ನಾಲ್ಕು ಪಥಗಳಿವೆ.ಎರಡೂ ಬದಿಗಳಲ್ಲಿ ಎರಡು ಪಥಗಳಿದ್ದು ಹೆದ್ದಾರಿಗೆ ಹೊಂದಿಕೊಂಡಿರುವ ಹಳ್ಳಿಗಳು ಮತ್ತು ಪಟ್ಟಣಗಳ ಜನನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನೂ 6 ಪಥದ ರಸ್ತೆ ಬೆಂಗಳೂರಿನಿಂದ ನೇರವಾಗಿ ಮೈಸೂರಿಗೆ ಸಂಚರಿಸಲು ಅನುವು ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ಬೆಂಗಳೂರು-ಮೈಸೂರು ಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಒಂದು ಬೆಂಗಳೂರಿನಿಂದ ನಿಡಘಟ್ಟ ಮತ್ತು ಇನ್ನೊಂದು ನಿಡಘಟ್ಟದಿಂದ ಮೈಸೂರಿನವರೆಗೆ ಎಂದು ಅವರು ಮಾಹಿತಿ ಹಂಚಿಕೊಂಡ ಅವರು ಯೋಜನೆ ಪೂರ್ಣಗೊಂಡ ನಂತರ, ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣದ ಸಮಯ ಕೇವಲ 70 ನಿಮಿಷಗಳು ಎಂದು ಅವರು ಹೇಳಿದರು.

ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಮಾರ್ಗದ ಮೂಲಕ ನಗರಗಳು ಮತ್ತು ಪ್ರದೇಶಗಳನ್ನು ಕೈಗಾರಿಕಾ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು” ಎಂದು ಹೇಳಿದ ಅವರುಈ ಹೆದ್ದಾರಿಯು ಕರ್ನಾಟಕದ ಕೊಡಗು, ತಮಿಳುನಾಡಿನ ಊಟಿ ಮತ್ತು ಕೇರಳಕ್ಕೆ ಪ್ರವೇಶ ಕಲ್ಪಿಸಲಿದೆ ಎಂದರು.

18 ಸಾವಿರ ಕೋಟಿ ರೂನಲ್ಲಿ ಲಾಜಿಸ್ಟಿಕ್ ಪಾರ್ಕ್

ಬೆಂಗಳೂರಿನಲ್ಲಿ 18,000 ಕೋಟಿ ರೂಪಾಯಿ ವೆಚ್ಚದಲ್ಲಿ ಲಾಜಿಸ್ಟಿಕ್ ಪಾರ್ಕ್‍ಗೆ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

“ನಗರದಲ್ಲಿ ಕಂಟೈನರ್ ಡಿಪೆÇೀಗಳು ಇರುವುದನ್ನು ವೈಮಾನಿಕ ತಪಾಸಣೆಯ ಸಮಯದಲ್ಲಿ ಗಮನಿಸಿದ್ದೇನೆ. ಕಂಟೈನರ್ ಮತ್ತು ಲಾಜಿಸ್ಟಿಕ್ ಪಾರ್ಕ್‍ಗಳನ್ನು ಒಟ್ಟಿಗೆ ತರುವ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.