ಬೆಂಗಳೂರು ಕ್ರಿಮಿನಲ್ಸ್ ಗಳಿಗೆ ಸುರಕ್ಷಿತ ತಾಣ: ಯತ್ನಾಳ

ವಿಜಯಪುರ:ಡಿ.10:ಕ್ರಿಮಿನಲ್ಸ್‍ಗಳಿಗೆ ಬೆಂಗಳೂರು ಸುರಕ್ಷಿತ ತಾಣವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಕ್ಸ್‍ನಲ್ಲಿ ಟ್ವೀಟ್ ಮಾಡಿದ್ದಾರೆ.

ನಗರದಲ್ಲಿ ಸ್ಲೀಪರ್ ಸೆಲ್ ಗಳು ಸಕ್ರಿಯವಾಗಿವೆ ಎಂಬ ಅಂಶವನ್ನು ಎನ್ ಐ ಎ ಅಧಿಕಾರಿಗಳ ದಾಳಿ ಸಾಬೀತು ಪಡಿಸಿದೆ ಎಂದು ಯತ್ನಾಳ ಎಕ್ಸನಲ್ಲಿ ಟ್ವೀಟ್ ಮಾಡಿದ್ದಾರೆ.

ಮುಸ್ಲಿಂ ಉಗ್ರಗಾಮಿಗಳು ರೂಪಿಸಿದ ಯಾವುದೇ ಕೆಟ್ಟ ಯೋಜನೆಗಳನ್ನು ವಿಫಲಗೊಳಿಸಲು ಸರ್ಕಾರ ಮತ್ತು ಪೊಲೀಸರು ತಮ್ಮ ಕಣ್ಗಾವಲು ಹೆಚ್ವಿಸುವುದು ಹಾಗೂ ತಮ್ಮ ಗುಪ್ತಚರ ಹೆಚ್ವಿಸುವುದು ಅನಿವಾರ್ಯವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.