ಬೆಂಗಳೂರು ಉದ್ಯಮಿ ಮೈಸೂರಿನಲ್ಲಿ ನಿಗೂಢ ಸಾವು

ಮೈಸೂರು. ಜ.03: ಬೆಂಗಳೂರು ಉದ್ಯಮಿ ಮೈಸೂರಿನ ಲಾಡ್ಜ್‍ನಲ್ಲಿ ನಿಗೂಢವಾಗಿ ಸಾವನ್ನಪಿರುವ ಘಟನೆ ನೆಡಿದಿದೆ.
ಉಮಾಶಂಕರ್ (45) ಮೃತ ದುರ್ದೈವಿಯಾಗಿದ್ದು, ಇವರ ಜೊತೆಯಲ್ಲಿ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ.
ಲಾಡ್ಜ್ ನಲ್ಲಿ ಇನ್ಸುಲಿನ್ ಹಾಗೂ ಔಷಧಿ ಬಾಟಲ್ ಡೆತ್‍ನೋಟ್ ಪತ್ತೆಯಾಗಿದೆ. ಪತಿ ಪತ್ನಿ ಇಬ್ಬರು ಸಹಿ ಮಾಡಿರುವ ಡೆತ್‍ನೋಟ್ ದೊರಕಿದೆ. ಅತಿಯಾದ ಇನ್ಸುಲಿನ್‍ನಿಂದ್ ಉಮಾಶಂಕರ್ ಮೃತಪಟ್ಟಿರುವ ಶಂಕೆಯಿದೆ.
ಸಾಕಷ್ಟು ಸಾಲ ಮಾಡಿದ್ದ ಉಮಾಶಂಕರ್. ಸಾಲಕ್ಕಾಗಿ ಕೆಲವರು ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ದಂಪತಿ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಸದ್ಯ ನಾಪತ್ತೆಯಾಗಿರುವ ಪತ್ನಿ ಕವಿತಾಗಾಗಿ ಹುಡುಕಾಟ ಶುರುವಾಗಿದ್ದೆ.
ಈ ಪ್ರಕರಣ ಮಂಡಿ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.