ಬೆಂಗಳೂರು ಉತ್ತರ ವಿ.ವಿ ಬ್ಯಾಸ್ಕೆಟ್ ಬಾಲ್ ಕೆ.ಜೆ. ತರುಣ್ ಎರಡನೇ ಭಾರಿ ಆಯ್ಕೆ

ಕೋಲಾರ,ನ,೧೫- ನಗರದ ಕನಕ ಬ್ಯಾಸ್ಕಟ್ ಬಾಲ್ ತಂಡದಲ್ಲಿನ ಕ್ರೀಡಾಪಟು ಕೆ.ಜೆ. ತರುಣ್ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುವಾಗಿ ಎರಡನೇ ಭಾರಿ ಆಯ್ಕೆಯಾಗಿರುವುದಕ್ಕೆ ಭಾನುವಾರ ಕನಕ ಬ್ಯಾಸ್ಕೆಟ್ ಬಾಲ್ ಕ್ಲಬ್‌ವತಿಯಿಂದ ಸನ್ಮಾನಿಸಲಾಯಿತು.
ನಗರದ ಎಸ್.ಡಿ.ಸಿ. ಕಾಲೇಜಿನಲ್ಲಿ ಮೊದಲ ವಾಣಿಜ್ಯ ಪದವಿ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿರುವ ತರುಣ್ ಮತ್ತು ಇತರರು ಸೋಮವಾರದಿಂದ ಕೇರಳದ ತಿರುವಂತಪುರದಲ್ಲಿ ಆಯೋಜಿಸಿರುವ ಅಂತರ ರಾಜ್ಯ ವಿಶ್ವವಿದ್ಯಾಲಯ ಬ್ಯಾಸ್ಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ. ಈ ಹಿನ್ನಲೆಯಲ್ಲಿ ತರುಣ್ ಅವರನ್ನು ಸನ್ಮಾನಿಸಿ ಬೀಳ್ಗೊಡಲಾಯಿತು.
ಈ ಸಂದರ್ಭದಲ್ಲಿ ಕನಕ ಬ್ಯಾಸ್ಕೆಟ್ ಬಾಲ್ ಕ್ಲಬ್‌ನ ಕಾರ್ಯದರ್ಶಿಗಳಾದ ಅಂಚೆ ಅಶ್ವಥ್ ಮಾತನಾಡಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬ್ಯಾಸ್ಕೆಟ್ ಬಾಲ್ ತಂಡಕ್ಕೆ ಎರಡನೇ ಭಾರಿಗೆ ತರುಣ್, ಪ್ರಥಮ ಬಾರಿಗೆ ಮಹಿಳಾ ಸಮಾಜ ಕಾಲೇಜಿನ ರೂಪೇಶ್ ಹಾಗೂ ಸ್ಮಾರ್ಟ್ ಕಾಲೇಜ್‌ನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿರುವ ಯಶ್ವಂತ್ ಕ್ರೀಡಾ ಪ್ರತಿಭೆಗಳಾಗಿದ್ದು, ಅಂತರರಾಜ್ಯ ವಿಶ್ವವಿದ್ಯಾಲಯದ ಬ್ಯಾಸ್ಕೆಟ್ ಬಾಲ್ ಪಂದಾವಳಿಯಲ್ಲಿ ಕೋಲಾರದಿಂದ ಪ್ರತಿನಿಧಿಸುತ್ತಿದ್ದು, ಉತ್ತಮ ಪ್ರದರ್ಶನವನ್ನು ನೀಡಿ ಕೋಲಾರ ಜಿಲ್ಲೆಗೆ ಮತ್ತು ಉತ್ತರ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು
ನಗರಸಭೆ ಮಾಜಿ ಅಧ್ಯಕ್ಷ ವಿ. ಪ್ರಕಾಶ್, ಕನಕ ಬ್ಯಾಸ್ಕೆಟ್ ಬಾಲ್ ಕ್ಲಬ್‌ನ ಪದಾಧಿಕಾರಿಗಳಾದ ಅಂತರಾಷ್ಟ್ರೀಯ ಕ್ರೀಡಾ ಪಟು ಜಗಧೀಶ್, ಬೆಮೆಲ್ ಮುದ್ದಣ್ಣ, ಟೈಲರ್ ಕಿಟ್ಟಣ್ಣ, ಕಂದಾಯ ಇಲಾಖೆ ರಾಜು, ಮುನಿಸ್ವಾಮಿ, ಪುರುಷೋತ್ತಮ್, ಗುರು, ಹೇಮಂತ್,ರಘು. ಸುನೀಲ್,ಶಿವರಾಮ್, ದರ್ಶನ್, ಉಮಶಂಕರ್ ಮುಂತಾದವರು ಇದ್ದರು,