ಬೆಂಗಳೂರು,ಮಾ.೩೦- ಒಂದು ವಾರಗಳ ಕಾಲ ರಾಜಧಾನಿಯ ಜನರಿಗೆ ದೇಶ ವಿದೇಶಗಳ ಅತ್ಯುತ್ತಮ ಆವೃತ್ತಿಯ ಚಿತ್ರಗಳ ಆವೃತ್ತಿಯ ಚಿತ್ರಗಳ ರಸದೌತಣ ಉಣಬಡಿಸಿದ ” ೧೪ ನೇ ಆವೃತ್ತಿಯ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಂಜೆ ತೆರೆ ಬೀಳಲಿದೆ.
ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚಿತ್ರೋತ್ಸವ ನಡೆಸಬೇಕೋ ಬೇಡವೋ ಎನ್ನುವ ಗೊಂದಲದ ನಡುವೆಯೇ ಅಂತೂ ಚಿತ್ರೋತ್ಸವ ನಡೆದಿತ್ತು. ಜೊತೆಗೆ ಚಿತ್ರಗಳ ಆಯ್ಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎನ್ನುವ ಆರೋಪ, ಗೊಂದಲ ಗೋಜಲುಗಳ ನಡುವೆ ಈ ಬಾರಿಯ ಚಿತ್ರೋತ್ಸವಕ್ಕೆ ಸಂಜೆ ವಿದ್ಯುಕ್ತ ತೆರೆ ಬೀಳಲಿದೆ
ಕನ್ನಡ ಸೇರಿದಂತೆ ೫೦ ಕ್ಕೂ ಹೆಚ್ಚು ದೇಶಗಳ ೨೦೦ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಕಂಡಿದೆ. ಕನ್ನಡ, ಏಶಿಯನ್ ವಿಭಾಗ, ಭಾರತೀಯ, ಸ್ಪರ್ದಾತ್ಮಕ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರಗಳಿಗೆ ಸಂಜೆ ಪ್ರಶಸ್ರಿ ಪ್ರದಾನ ನಡೆಯಲಿದೆ.
ಸಮಾರೋಪ ಸಮಾರಂಭ:
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ಸಂಜೆ ೬.೩೦ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾಮರ್ ಚಂದ್ ಗೆಹ್ಲೋಟ್ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಈ ಬಾರಿ ಪ್ರಶಸ್ತಿ ಮೊತ್ತವನ್ನು ಅತ್ಯುತ್ತಮ ಚಿತ್ರಕ್ಕೆ ೧೦ ಲಕ್ಷ, ದ್ವಿತೀಯ ಚಿತ್ರಕ್ಕೆ ೫ ಲಕ್ಷ ಮತ್ತು ತೃತೀಯ ಚಿತ್ರಕ್ಕೆ ೩ ಲಕ್ಷ ಬಹುಮಾನಕ್ಕೆ ಹೆಚ್ಚಿಸಲಾಗಿದೆ.
ಕನ್ನಡದ ಸುಮಾರು ೪೫ ಚಿತ್ರಗಳು ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಜೊತೆಗೆ ಪ್ರಶಸ್ರಿ ಮೊತ್ತ ಹೆಚ್ಚಳ ಮಾಡಿರುವುದರಿಂದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಬೆಂಗಳೂರಿನ ಒರಾಯನ್ ಮಾಲ್ ನ ೧೧ ಪರದೆಗಳು, ಚಲನಚಿತ್ರ ಕಲಾವಿದರ ಸಂಘ, ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಚಿತ್ರ ಪ್ರದರ್ಶನ ನಡೆದಿತ್ತು.
ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಸೇರಿದಂತೆ ಸಿನಿಮಾ ಗಣ್ಯರು ಸೇರಿದಂತೆ ಗಣ್ಯಾತಿ ಗಣ್ಯರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.