ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಸಂಜೆ ಉದ್ಘಾಟನೆ
ಬೆಂಗಳೂರು,ಮಾ.೨೩- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ೧೪ನೇ ಆವೃತ್ತಿಗೆ ಇಂದು ಸಂಜೆ ವರ್ಣ ರಂಜಿತ ಚಾಲನೆ ಸಿಗಲಿದ್ದು ನಾಳೆಯಿಂದ ಇದೇ ೩೦ರವರೆಗ ಕನ್ನಡದ ಸೇರಿದಂತೆ ಜಗತ್ತಿನ ನಾನಾ ಭಾಷೆಯ ಅಪರೂಪದ ಚಿತ್ರಗಳು ಪ್ರದರ್ಶನ ಕಾಣುವ ಮೂಲಕ ಸಿನಿ ರಸಿಕರಿಗೆ ರಂಜನೆಯ ರಸದೌತಣ ನೀಡಲು ಸಜ್ಜಾಗಿದೆ.
ಒರಾಯನ್ ಮಾಲ್, ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ೫೦ ಕ್ಕೂ ಅಧಿಕ ದೇಶಗಳ ಕಲಾತ್ಮಕ, ವಾಣಿಜ್ಯ ಸೇರಿದಂತೆ ಅಪರೂಪದ ೨೦೦ಕ್ಕೂ ಹೆಚ್ಚು ಚಿತ್ರಗಳು ಸಿನಿಮಾ ಪ್ರೇಕ್ಷಕರಿಗೆ ರಸದೌತಣ ನೀಡಲು ಸಜ್ಜಾಗಿವೆ.ಚಿತ್ರೋತ್ಸವ ಅಧ್ಯಕ್ಷ ಅಶೋಕ್ ಕಶ್ಯಪ್ ಸೇರಿದಂತೆ ಚಿತ್ರೋತ್ಸವದ ಸಂಘಟಕರು ವಿವಿಧ ಭಾಷೆಯ ಅತ್ಯುತ್ತಮ ಚಿತ್ರಗಳನ್ನು ಹೆಕ್ಕಿ ತೆಗದು ಜನರ ಮುಂದೆ ಪ್ರದರ್ಶನಕ್ಕೆ ಸಜ್ಜಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಸಾಥ್ ನೀಡಿದೆ.ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಿತ್ರ ಪ್ರದರ್ಶನ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ಇಂದು ಸಂಜೆ ೮ ಗಂಟೆಗೆ ಪ್ರದರ್ಶನ ಕಾಣಲಿದೆ.
ರಮ್ಯಾ, ರಮ್ಯಾ ಕೃಷ್ಣ ಭಾಗಿ:
ಚಿತ್ರೋತ್ಸವದ ಉದ್ಘಾಟನೆಯ ವೇಳೆ ರಾಜ್ಯಸಭೆಯ ಸದಸ್ಯರೂ ಆಗಿರುವ ಹಿರಿಯ ಚಿತ್ರಕಥೆಗಾರ ವಿ.ವಿಜಯೇಂದ್ರ ಪ್ರಸಾದ್, ಬಾಲಿವುಡ್ ನಿರ್ದೇಶಕ ಗೋವಿಂದ ನಿಹಾಲಾನಿ, ಖ್ಯಾತ ನಟಿಯರಾದ ,ರಮ್ಯಾ,ರಮ್ಯಾ ಕೃಷ್ಣ, ನಟ, ಅಭಿಷೇಕ್ ಅಂಬರೀಷ್, ನಟಿ ಸಪ್ತಮಿ ಗೌಡ,ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಲಿದ್ದಾರೆ.ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಳು ನಟಿ ಹರ್ಷಿಕಾ ಪೂಣಚ್ಚ ಗಣ್ಯರಿಗೆ ಸಾಥ್ ನೀಡಲಿದ್ದಾರೆ.
ಸಂಜೆ ಉದ್ಘಾಟನೆ:
ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿರುವ ೧೪ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೀತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವ ಮೂಲಕ ಚಿತ್ರೋತ್ಸವಕ್ಕೆ ಹಸಿರುವ ನಿಶಾನೆ ತೋರಲಿದ್ದಾರೆ. ಚಿತ್ರೋತ್ಸವದ ಸಂಘಟನಾ ಸಮಿತಿ ಅಧ್ಯಕ್ಷ ಸಚಿವ ಆರ್. ಅಶೋಕ್, ಶಾಸಕ ರಿಜ್ವಾನ್ ಹರ್ಷದ್, ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್. ರಿಜಿಸ್ಟಾರ್ ಹಿಮಂತರಾಜ್ ಜಿ. ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಸೇರಿದಂತೆ ಆಹ್ವಾನಿತರು ಭಾಗಿಯಾಗಲಿದ್ದರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಧಾನಸೌಧದ ಮುಂಭಾಗ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ನಾಳೆಯಿಂದ ರಸದೌತಣ
ನಾಳೆಯಿಂದ ಮಾರ್ಚ್ ೩೦ರ ತನಕ ವಿಶ್ವದ ನಾನಾ ಭಾಗಗಳ ೨೦೦ಕ್ಕೂ ಹೆಚ್ಚು ಚಿತ್ರಮಂದಿರಗಳು ಒರಾಯನ್ ಮಾಲ್‌ನ ೧೧ ಪರದೆಗಳು, ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಚಿತ್ರಗಳು ಪ್ರದರ್ಶನ ಕಾಣಲಿದ್ದು ಸಿನಿಮಾ ರಸಿಕರಿಗೆ ರಂಜನೆಯ ರಸದೌತಣ ಉಣಬಡಿಸಲಿದೆ.
ಈ ಬಾರಿ ಚಿತ್ರೋತ್ಸವವನ್ನು ಹಿಂದಿನ ಚಿತ್ರೋತ್ಸವಕ್ಕಿಂತ ಅದ್ದೂರಿಯಾಗಿ ಆಚರಿಸಲ ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಸೇರಿದಂತೆ ಮತ್ತಿತರ ತಂಡ ಟೊಂಕಕಟ್ಟಿ ನಿಂತಿದೆ.