ಬೆಂಗಳೂರು‌ ಗುಣಮಟ್ಟದ ವಿದ್ಯುತ್ ವಿತರಣೆ

ನವದೆಹಲಿ,ಜ.4-ಬೆಂಗಳೂರು  ನಗರದಲ್ಲಿ ವಿದ್ಯುತ್ ಸರಬರಾಜಿನ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲು,  ವಿದ್ಯುತ್ ವಿತರಣಾ ವ್ಯವಸ್ಥೆ ಆಧುನೀಕರಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಎಡಿಬಿ  ಕೇಂದ್ರ ಸರ್ಕಾರ, 100 ದಶಲಕ್ಷ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಡಾ. ಸಿ.ಎಸ್. ಮೊಹಾಪಾತ್ರ ಮತ್ತು ಎಡಿಬಿಯ ಭಾರತದ ಉಸ್ತುವಾರಿ  ಹೋ ಯುನ್ ಜಿಯಾಂಗ್ ಸಹಿ ಮಾಡಿದರು.

100 ದಶಲಕ್ಷ ಡಾಲರ್ ಸಾಲದ ಹೊರತಾಗಿ, ಎಡಿಬಿ ಈ ಯೋಜನೆಗೆ ಖಾತ್ರಿಯಿಲ್ಲದ 90 ದಶಲಕ್ಷ ಡಾಲರ್ ಸಾಲವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಗೆ ನೀಡಲುಮುಂದಾಗಿದೆ.

ಸಾಲ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಡಾ. ಮೊಹಾಪಾತ್ರ , ಕಂಬಗಳ ಮೂಲಕ ಇರುವ ವಿತರಣಾ ಮಾರ್ಗಗಳನ್ನು ಭೂಮಿಯೊಳಗಿನ ಕೇಬಲ್‌ಗಳಾಗಿ ಪರಿವರ್ತಿಸುವುದರಿಂದ ಇಂಧನ ಉಳಿತಾಯದ ವಿತರಣಾ ಜಾಲವನ್ನು ನಿರ್ಮಿಸಲು, ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳನ್ನು ಕಡಿಮೆ ಮಾಡಲು ಮತ್ತು ನೈಸರ್ಗಿಕ ಅಪಾಯಗಳಾದ ಚಂಡಮಾರುತ,ಬಾಹ್ಯ ಅಡಚಣೆಗಳಿಂದ  ಉಂಟಾಗುವ ವಿದ್ಯುತ್ ಕಡಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಎಡಿಬಿಯ ಯೋ ಯುನ್ ಜಿಯಾಂಗ್ ಮಾತನಾಡಿ, ಮೊದಲ ಬಾರಿಗೆ ಹೊಸ ಹಣಕಾಸು ವ್ಯವಸ್ಥೆಯನ್ನು ಈ ಯೋಜನೆಗಾಗಿ ಒದಗಿಸಲಾಗುವುದು. ಬಂಡವಾಳ ವೆಚ್ಚಕ್ಕಾಗಿ ಹಣವನ್ನು ಸಂಗ್ರಹಿಸಲು ಮಾರುಕಟ್ಟೆ ಆಧಾರಿತ ವಿಧಾನದತ್ತ ಸಾಗಲು ಬೆಸ್ಕಾಮ್‌ಗೆ ಸಹಾಯ ಮಾಡುತ್ತದೆ ಎಂದು ತಿಳಿದರು

ಭೂಮಿಯೊಳಗಿನ ವಿತರಣಾ ಕೇಬಲ್‌ಗಳಿಗೆ ಸಮಾನಾಂತರವಾಗಿ, ಸಂಪರ್ಕ ಜಾಲವನ್ನು ಬಲಪಡಿಸಲು 2,800 ಕಿ.ಮೀ.ಗೂ ಹೆಚ್ಚಿನ ಫೈಬರ್ ಆಪ್ಟಿಕಲ್ ಕೇಬಲ್‌ಗಳನ್ನು ಸ್ಥಾಪಿಸಲಾಗುವುದು. ಸುಮಾರು 7,200 ಕಿ.ಮೀ ವಿತರಣಾ ಮಾರ್ಗಗಳನ್ನು ಭೂಮಿಯೊಳಗೆ ಹಾಕಲಾಗುವುದು. ಇದು ತಾಂತ್ರಿಕ ಮತ್ತು ವಾಣಿಜ್ಯ ನಷ್ಟವನ್ನು ಸುಮಾರು ಶೇ30 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.