ಬೆಂಗಳೂರಿನ ೧೧ ಜನರಲ್ಲಿ ರೂಪಾಂತರಿ ವೈರಸ್ ಪತ್ತೆ


ಬೆಂಗಳೂರು.ಏ೧೯: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ಬೆಂಗಳೂರು ನಗರದಲ್ಲಿ ೧೧ ಜನರಲ್ಲಿ ಯುಕೆ ರೂಪಾಂತರಿ ವೈರಸ್ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಒಟ್ಟು ೧೧ ಮಂದಿಯಲ್ಲಿ ಯುಕೆ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ಆರ್ ಆರ್ ನಗರದ ಮೂವರು ವಿದೇಶ ಪ್ರವಾಸಕ್ಕೆ ಹೋಗಿದ್ದರು. ಇನ್ನು ಉಳಿದ ೮ ಜನರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಯುಕೆ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ದಾಸರಹಳ್ಳಿಯ ಮೂವರು, ದಾಸರಹಳ್ಳಿಯ ಹೌಸ್ ಕಾಲೋನಿಯಲ್ಲಿ ನಾಲ್ವರು ಹಾಗೂ ಸಿಂಗಸಂದ್ರದಲ್ಲಿ ಒಬ್ಬರಿಗೆ ಯುಕೆ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.