ಬೆಂಗಳೂರಿನ ನಂತರ ಮೈಸೂರಿನಲ್ಲೇ ಹೆಚ್ಚು ಸೋಂಕು

ಮೈಸೂರು:ಏ:29: ಬೆಂಗಳೂರಿನ ನಂತರ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವ ಜನಿಕರು ಅನಗತ್ಯ ಓಡಾಡದಂತೆ ಮೈಸೂರು ಜಿಲ್ಲಾ ಪೆÇಲೀಸರು ನಾಕಾಬಂದಿ ಹಾಕಿದ್ದಾರೆ.
ಕೊರೋನಾ ನಿಯಂತ್ರಣ ಮಾಡಲೆಂದು ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಹಿನ್ನಲೆ ಮೈಸೂರು ಜಿಲ್ಲೆಯಲ್ಲಿ 24 ಕಡೆ ಚೆಕ್ ಪೆÇೀಸ್ಟ್ ಹಾಕಲಾಗಿದ್ದು ಅನಾವಶ್ಯಕವಾಗಿ ಸಾರ್ವಜನಿಕರು ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.
ಮೈಸೂರು ಜಿಲ್ಲಾ ಅಡಿಶನಲ್ ಎಸ್.ಪಿ ಶಿವಕುಮಾರ್ ಅವರು ಸ್ವತಃ ಕೆ.ಆರ್.ನಗರ,ಹುಣಸೂರು, ಪಿರಿಯಾಪಟ್ಟಣ, ಬೆಟ್ಟದಪುರ,ಬೈಲುಕುಪ್ಪೆ ಬಳಿ ಇರುವ ಚೆಕ್ ಪೆÇೀಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಸೂಚನೆಗಳನ್ನು ನೀಡಿದರು. ಪೆÇಲೀಸ್ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ತಿಳಿಸಿದರು.