ಬೆಂಗಳೂರಿನ ಅಭಿವೃದ್ದಿಗೆ ಕೆಂಪೆಗೌಡರ ಕೊಡುಗೆ ಅಪಾರ


ಸಂಜೆವಾಣಿ ವಾರ್ತೆ
ಸಂಡೂರು :ಜೂ:28  ಕರ್ನಾಟಕದ ರಾಜಧಾನಿ ಬೆಂಗಳೂರು ಪ್ರಮುಕ ತಾಂತ್ರಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಬೆಂಗಳೂರಿನ ಅಭಿವೃದ್ದಿಗೆ ನಾಡ ಪ್ರಭು ಕೆಂಪೆಗೌಡರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ನಾಡ ಪ್ರಭು ಕೆಂಪೆಗೌಡರು ತಮ್ಮ ಆಡಳಿತದಲ್ಲಿ ಜನರಿಗೆ ನೂರಾರು ಕೆರೆಕಟ್ಟೆಗಳನ್ನು ನಿರ್ಮಿಸಿ ಸಾಮಾಜಿಕ ಶೈಕ್ಷಣಿಕವಾಗಿ ಆರ್ಥಿಕವಾಗಿ ಜನರ ಏಳಿಗೆಗಾಗಿ ಶ್ರಮಿಸಿದ ಮಹಾನುಭಾವರು. ಕೆಂಪೆಗೌಡರು ನಾಡಿಗೆ ಪ್ರಭುವಾಗಿ ಜನಮನದಲ್ಲಿ ಅಚ್ಚಳಿಯದೇ ಇಂದಿಗೆ ಉಳಿದಿದ್ದಾರೆ. ಸಾಧನೆಯಿಂದ ಉತ್ತುಂಗ ಸ್ಥಾನಕ್ಕೆ ಏರಲು ಸಾಧ್ಯ. ಎನ್ನುವ ಮಾತು ಕೆಂಪೆಗೌಡರಿಗೆ ಅನ್ವಯಿಸುತ್ತದೆ. 1510ರಲ್ಲಿ ಜನಿಸಿದ ಕೆಂಪೆಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜವಾಗಿದ್ದು, ಯಲಹಂಕ ನಾಡಿನ ಪಾಳೆಯಗಾರರಾಗಿದ್ದರು. ಹಂಪಿ ವೈಭವಕಂಡು ಬೆರಗಾದ ಗೌಡರು ಜನರ ದೂರ ದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೇ ದೇಶದ ಹಾಗೂ ಜಗತ್ತಿನ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂದು ಸಂಡೂರಿನ ತಹಶೀಲ್ದಾರರಾದ ಶಾಂತಲಾ ಚಂದನ್ ತಿಳಿಸಿದರು.
ಅವರು ಸಂಡೂರಿನ ತಹಶೀಲ್ದಾರರ ಕಛೆರಿಯಲ್ಲಿ ತಾ. ಆಡಳೀತ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೆಗೌಡರ ಜಯಂತಿ ಸಂದರ್ಭದಲ್ಲಿ ಪುಸ್ಪನಮ ಸಲ್ಲಿಸಿ ಮಾತನಾಡಿದರು. ಶಿರಸ್ತೆದಾರ ಕೆ.ಎಂ. ಶಿವಕುಮಾರ ಮಾತನಾಡಿ ನಾಡಪ್ರಭು ಕೆಂಪೆಗೌಡರು ಒಂದೇ ಜಾತಿಗೆ ಸೀಮಿತ ಮಾಡುವುದು ತಪ್ಪು ಭಾವನೆ. ಇಡೀ ರಾಜ್ಯದ 7 ಕೋಟಿ ಜನರ ಸೊತ್ತು ಸರ್ಕಾರದಿಂದ ಜಯಂತಿಗಳನ್ನು ಆಚರಣೆ ಮಾಡಿದರೆ ಇಡೀ ಸಮಾಜ ಆಚರಣೆ ಮಾಡಿದಂತೆ ಎನ್ನುವುದನ್ನ ಮರೆಯಬಾರದು. ಇಂದೇನಾದರೂ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದರೆ ನಾಡ ಪ್ರಭು ಕೆಂಪೆಗೌಡರೇ ಕಾರಣ. ನಾವು ಮೊದಲು ಇತಿಹಾಸವನ್ನು ತಿಳಿಯಬೇಕಾಗಿದೆ. ಇತಿಹಾಸ ತಿಳಿಯುವುದರ ಜೊತೆಗೆ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೆಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೋವಿ ಸಿದ್ದು, ಕಿರಣ ಕುಮಾರ ಶಿವಕುಮಾರ ಹಲವಾರು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪ್ರಥಮ ಬಾರಿ ಅಚರಣೆಯ ನಾಡ ಪ್ರಭು ಕೆಂಪೆಗೌಡರ ಜಯಂತಿಯನ್ನು ಯಶಸ್ವಿಗೊಳಿಸಿದರು.