ಬೆಂಗಳೂರಿನಲ್ಲಿ 2,415 ಹೊಸ ಕೋವಿಡ್ ಪ್ರಕರಣ

Covid test for public  Front page city

ಬೆಂಗಳೂರು, ಜೂ.೯- ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ೨,೪೧೫ ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನಗರದ ಬೊಮ್ಮನಹಳ್ಳಿಯಲ್ಲಿ ೨೫೭, ದಾಸರಹಳ್ಳಿ ೮೨, ಪೂರ್ವ ವಲಯ ೩೨೦, ಮಹಾದೇವಪುರ ೪೦೧, ಆರ್.ಆರ್ ನಗರ ೧೬೧, ವಲಯ ದಕ್ಷಿಣ ೨೧೬, ವಲಯ ಪಶ್ಚಿಮ ೧೮೩, ಯಲಹಂಕದಲ್ಲಿ ೧೮೮ ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ನಿನ್ನೆ ನಗರದಲ್ಲಿ ೨೦೨೮ ಪ್ರಕರಣಗಳು ಪತ್ತೆಯಾಗಿತ್ತು, ೪೪ ಮಂದಿ ಮೃತಪಟ್ಟಿದ್ದರು.೧,೦೧,೯೬೫ ಸಕ್ರಿಯ ಪ್ರಕರಣಗಳಿವೆ. ಜೂನ್ ೭ ರಂದು ೭೦,೪೩೯ ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ೯೩,೩೩೫ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.
ಅಲ್ಲದೆ, ಪಾಸಿಟಿವಿಟಿ ಪ್ರಮಾಣ ಶೇ.೪.೫೨ರಷ್ಟು ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ.೭.೩೦ರಷ್ಟು ಇದೆ ಎಂದು ಅರೋಗ್ಯ ಇಲಾಖೆ ಮಾಹಿತಿ ನೀಡಿದೆ.