ಬೆಂಗಳೂರಿನಲ್ಲಿ ವಿರೇಶ್ ದಳವಾಯಿ ತಂಡದ ಜನಪದ ಗೀತೆಗಳ ಮೋಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಬಾಣಸವಾಡಿಯ ಕಲ್ಯಾಣ ನಗರದ ಡಾ. ರಾಜಕುಮಾರ್ ಪಾರ್ಕ್ ನಲ್ಲಿ ನಿನ್ನೆ  ಸಂಜೆ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ  ವೀರೇಶ್ ದಳವಾಯಿ ತಂಡ  ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.
ಕಾರ್ಯಕ್ರಮದಲ್ಲಿ ಎಲ್ಲೋ ಜೋಗಪ್ಪ ನಿನ್ ಅರಮನೆ ಚೆಲ್ಲಿದರು ಮಲ್ಲಿಗೆಯ ಅರಮನೆ ಆಯ್ಕಾರ ಅಂಬೇಡ್ಕರ್ ಗೀತೆ ಹಾಗೂ ರೈತ ಗೀತೆಗಳ ಹಾಡುವ ಮೂಲಕ ಬೆಂಗಳೂರಿನ ಜನರ ಮನರಂಜಿಸಿದರು.  ತಂಡದ ಮುಖ್ಯ ಗಾಯಕ ವೀರೇಶ್ ದಳವಾಯಿ, ಸಹ ಗಾಯಕ ದೊಡ್ಡ ಹುಸೇನಪ್ಪ ಅರಳಿಗನೂರು,ಹೆಚ್ ಜಿ ಸುಂಕಪ್ಪ,  ಉಷಾ. ಬಯಲಾಟ  ಅಕಾಡೆಮಿ ಮಾಜಿ ಸದಸ್ಯ ಹೆಚ್. ತಿಪ್ಪೇಸ್ವಾಮಿ ಕ್ಯಾಶಿಯೊ, ಡಿ ವಿರುಪಾಕ್ಷಿ ತಬಲ,  ಹೇಮಂತ್ ಸಂಡೂರು ಜಂಬೆ ವಾದ್ಯ ಕಲಾವಿದರಾಗಿ ಭಾಗಿಯಾಗಿದ್ದರು.