ಬೆಂಗಳೂರಿನಲ್ಲಿ ಜು. 5ರಂದು ವೀರಶೈವ ಲಿಂಗಾಯತ ಶಾಸಕರು, ಸಚಿವರಿಗೆ ಸನ್ಮಾನ

ಕಲಬುರಗಿ,ಜು.1: ವೀರಶೈವ ಲಿಂಗಾಯತ್ ಸಂಘಟನಾ ವೇದಿಕೆಯಿಂದ ವೀರಶೈವ ಲಿಂಗಾಯತ್ ಸಮುದಾಯದ ಶಾಸಕರು ಹಾಗೂ ಸಚಿವರುಗಳಿಗೆ ಬೆಂಗಳೂರಿನಲ್ಲಿ ಜುಲೈ ರಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಶ್ರೀನಿವಾಸ್ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಳೆದ ಆರು ವರ್ಷಗಳಿಂದ ಜನಾಂಗ ಸಂಘಟನೆಯ ಹಾಗೂ ಸಮಾಜ ಅಬಿವೃದ್ದಿಗಾಗಿ ಈ ಸಂಘಟನೆ ಶ್ರಮಿಸುತ್ತಿದೆ, ಹಾಗಾಗಿ ಸಮಾಜ ದಲ್ಲಿರುವ ಕೆಲವು ಆತಂಕ ಬಿನ್ನಾಬಿಪ್ರಾಯಗಳನ್ನು ಮತ್ತು ಸಮಾಜಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು ಒದಗಿಸಿಕೊಡಬೇಕೆಂದು ಸಮುದಾಯದ ಶಾಸಕ ಮತ್ತು ಸಚಿವರುಗಳಿಗೆ ಒತ್ತಾಯಿಸಿ ಮನವಿ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ್ ಸಂಘಟನಾ ವೇದಿಕೆಯ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಅವರು ಮಾತಾನಾಡಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 5ರಂದು ಸಂಜೆ 5 ಗಂಟೆಗೆ ಜರುಗುವ ಸಮಾರಂಭದಲ್ಲಿ ಕರ್ನಾಟಕದ 56 ಜನ ವೀರಶೈವ ಲಿಂಗಾಯತ್ ಸಮುದಾಯದ ಶಾಸಕರು, ಹಾಗೂ 6 ಜನ ಸಚಿವರು ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ್ ಮತ್ತು ತೆಲಂಗಾಣದ ಕೆಲ ಶಾಸಕರು ಮತ್ತು ಸಂಸದರು ಕಾರ್ಯಕ್ರಮದಲ್ಲಿ ಪಾಲೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮವು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾದ ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ್ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ನಾಡಿನ ವಿವಿಧ ಮಠಗಳು ಪೂಜ್ಯರುಗಳು ಗಣ್ಯರು ಮತ್ತು ವೀರಶೈವ ಲಿಂಗಾಯತ್ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲೊಳ್ಳಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ್ ಸ್ವಾಮಿ, ಗಂಗಾಧರ್ ಶಾಸ್ತ್ರೀ, ಗಣಪತಿರಾವ್ ಮುಂತಾದವರು ಉಪಸ್ಥಿತರಿದ್ದರು.