ಬೆಂಗಳೂರಿನಲ್ಲಿ ಕಸಾಪ ಅಧ್ಯಕ್ಷರ ಭೇಟಿ ಮಾಡಿದ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ

ದಾವಣಗೆರೆ. ಮಾ.೧೪:- ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ, ನಾಡೋಜ ಡಾ. ಮಹೇಶ್ ಜೋಶಿ ಅವರನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ. ವಾಮದೇವಪ್ಪ ಭೇಟಿ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರ ಜೊತೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಯ ಬಗ್ಗೆ ,ಸಾಹಿತ್ಯ ಪರಿಷತ್ ಚಟುವಟಿಕೆಗಳ ಬಗ್ಗೆ ಮತ್ತು ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ತಾಲ್ಲೂಕು ಸಮ್ಮೇಳನಗಳ ಹಾಗೂ ಜಿಲ್ಲಾ ಸಮ್ಮೇಳನದ ಬಗ್ಗೆ  ಸೌಹಾರ್ದಯುತವಾಗಿ  ಚರ್ಚಿಸಿದರು  , ನಂತರ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ  ನೇ ಭಾ ರಾಮಲಿಂಗ ಶೆಟ್ಟಿ, ಶ್ರೀಮತಿ ಡಾ.ಪದ್ಮಿನಿ  ನಾಗರಾಜು  , ಗೌರವ ಕೋಶಾಧ್ಯಕ್ಷರಾದ  ಬಿ ಎಂ. ಪಟೇಲ್ ಪಾಂಡು ಅವರನ್ನು , ಮಾಧ್ಯಮ ಪ್ರತಿನಿಧಿ  ಶ್ರೀನಾಥ್,  ವ್ಯವಸ್ಥಾಪಕ   ಪಾರ್ಶ್ವನಾಥ್ ಮತ್ತಿತರರನ್ನು ಭೇಟಿ ಮಾಡಿದರು.