ಬೆಂಗಳೂರಿಗೆ ಹೊರಟ ಶಿವಾನಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.28:- ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ‘ಶಿವಾನಿ’ ಹೆಸರಿನ ಗಂಡು ಜಿರಾಫೆಯನ್ನು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆದೊಯ್ಯಲಾಗಿದೆ.
ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮೋದನೆಯ ಮೇರೆಗೆ ‘ಶಿವಾನಿ’ ಎಂಬ ಹೆಸರಿನ 1.7ವರ್ಷ ವಯಸ್ಸಿನ ಒಂದು ಹೆಣ್ಣು ಜಿರಾಫೆಯನ್ನು ಮೈಸೂರು ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆದೊಯ್ಯಲಾಗಿದೆ.
ಒತ್ತಡಮುಕ್ತ ಹಾಗೂ ಸುಲಲಿತ ಸಾಗಾಣಿಕೆ ಅನುವಾಗುವಂತೆ ಶಿವಾನಿ ಜಿರಾಫೆಗೆ ಕಳೆದ ಕೆಲವು ವಾರಗಳಿಂದಯನ್ನು ಕ್ರೇಟ್‍ನ ಒಳಹೋಗುವಂತೆ ತರಬೇತಿ ನೀಡಲಾಗಿತ್ತು. 13.5 ಅಡಿ ಎತ್ತರ ಇರುವ ಶಿವಾನಿ ಜಿರಾಫೆಯು 2022ರ ಜುಲೈ 4ರಲ್ಲಿ ಭರತ ಮತ್ತು ಬಬ್ಲಿ ಜಿರಾಫೆಗಳಿಗೆ ಜನಿಸಿದ್ದು, ಇಂದು ಬೆಳಗ್ಗೆ 7.30ರ ವೇಳೆಗೆ ಮೈಸೂರು ಮೃಗಾಲಯದಿಂದ ಪ್ರಯಾಣ ಬೆಳಸಿದ ಜಿರಾಫೆಯನ್ನು ಬನ್ನೇರುಘಟ್ಟ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಸಹಾಯಕ ನಿರ್ದೇಶಕ ಡಾ.ಜೆ.ಎಲ್. ಶ್ರೀನಿವಾಸ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ವೆಟರಿನರಿ ಅಡ್ಡೆಸರ್ ಡಾ. ಕೆ.ವಿ.ಮದನ್, ವಲಯ ಅರಣ್ಯಾಧಿಕಾರಿ ವಿ.ಮುನಿರಾಜು ಮತ್ತು ದಿನೇಶ್, ಪಶುವೈದ್ಯಾಧಿಕಾರಿ ಡಾ. ಎಂ.ಎಸ್. ರೋಷನ್ ಕೃಷ್ಣ ಪ್ರಾಣಿಪಾಲಕರು ಮತ್ತು ಸಂಬಂಧಿಸಿದ ಸಿಬ್ಬಂದಿಗಳೊಂದಿಗೆ ಕಳುಹಿಸಿಕೊಡಲಾಗಿದೆ. 200 ಕಿ.ಮೀ ದೂರ ಪ್ರಯಾಣಿಸಿ ಜಿರಾಫೆಯು ಇಂದು ಮಧ್ಯಾಹ್ನ 12.00 ಘಂಟೆ ವೇಳೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ತಲುಪಿ ಅಲ್ಲಿನ ಹೆಣ್ಣು ಜಿರಾಫೆಯೊಂದಿಗೆ ಸೇರಿದೆ.
2018ನೇ ಸಾಲಿನಿಂದ ಇಲ್ಲಿಯವರೆಗೂ ಭಾರತೀಯ/ವಿದೇಶಿ ಮೃಗಾಲಯಗಳಿಗೆ ಮೈಸೂರು ಮೃಗಾಲಯದ ಆರು ಜಿರಾಫೆಗಳನ್ನು ಕಳುಹಿಸಿಕೊಟ್ಟಿದೆ.