ಬೆಂಗಳೂರಿಗೆ ತೆರಳುವ ಬಸ್‍ಗೆ ಮಾದ್ವಾರ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಸೈದಾಪುರ:ಜು.2:ಸೇಡಂದಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭ ಮಾಡಲಾದ ನೂತನ ಬಸ್‍ಗೆ ಮಾದ್ವಾರ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಸೇಡಂ ಬಸ್ ಡಿಪೋಗೆ ಸೇರಿದ ಈ ಬಸ್ ಗುರುಮಠಕಲ, ಕಂದಕೂರ, ಎಲ್ಹೇರಿ, ಕಾಳೆಬೆಳಗುಂದಿ ಸೇರಿದಂತೆ ವಿವಿಧ ಗ್ರಾಮಗಳ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಪ್ರಮುಖ ಗ್ರಾಮಗಳಾದ ಮಾದ್ವಾರ, ಸೈದಾಪುರ, ರಾಯಚೂರ ಮೂಲಕ ಬೆಂಗಳೂರು ತಲುಪುತ್ತದೆ. ಸೇಡಂದಿಂದ ಮದ್ಹಾಹ್ನ 2-30ಕ್ಕೆ ಬಿಟ್ಟು ಮಾದ್ವಾರ ಗ್ರಾಮಕ್ಕೆ ಸಾಯಂಕಾಲ ಬರುತ್ತದೆ. ಬೆಳಗಿನ ಜಾವ ಬೆಂಗಳೂರು ತಲುಪುತ್ತದೆ. ಈ ಭಾಗದ ಸಾಕಷ್ಟು ಜನರಿಗೆ ಇದು ಉಪಯೋಗವಾಗಲಿದೆ. ಈ ವಿದಧ ಸೌಕರ್ಯ ಕಲ್ಪಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ರಾಚಪ್ಪ.ಎಂ. ಅವರಿಗೆ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಲ್ಲೇಶ, ತಾಯಪ್ಪ, ದೇವಪ್ಪ ಕಂಬಾರ, ಬಾಬು ಟೇಲರ, ಅಯ್ಯಪ್ಪ ಕುಂಬಾರ, ಮಹಾದೇವಪ್ಪ, ಭೀಮಣ್ಣ, ಗೋಪಾಲ, ನರಸಪ್ಪ, ತಾಯಪ್ಪ, ಬನ್ನಪ್ಪ ಸೇರಿದಂತೆ ಇತರರಿದ್ದರು.