ಬೆಂಗಳೂರಿಗೆ ತೆರಳಲು ಸೂರ್ಯಕಾಂತ ನಾಗಮಾರಪಳ್ಳಿ ಬಸ್ ವ್ಯವಸ್ಥೆ

ಬೀದರ್: ಜು.19:ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಉದ್ಘಾಟನಾ ಸಮಾರಂಭಕ್ಕೆ ಬೆಂಗಳೂರಿಗೆ ಹೋಗಲು ಸಮಾಜದ ಬಾಂದವರಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬಸ್ ವ್ಯವಸ್ಥೆ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಘಾಟನೆ ಸಮಾರಂಭ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನಿಗಮ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ಪಾಲ್ಗೊಳ್ಳುವರು. ನಿಗಮದ ಕಾರ್ಯಕ್ರಮದಲ್ಲಿ ಬೆಂಗಳೂರಿಗೆ ತೆರಳಲು ಎರಡು ಬಸ್‍ಗಳನ್ನು ನಗರದಿಂದ ಸೋಮವಾರ ಹೊರಡಿತು.
ರಾಜ್ಯದ ಮರಾಠರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ ನಿಗಮ ರಚಿಸಿದೆ. ಜಿಲ್ಲೆಯವರೇ ಆದ ಮಾಜಿ ಶಾಸಕ ಎಂ.ಜಿ. ಮುಳೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದೀಗ ನಿಗಮ ಕಾರ್ಯಾರಂಭವೂ ಮಾಡಲಿರುವುದು ಮರಾಠ ಸಮುದಾಯಕ್ಕೆ ಬಹಳ ಸಂತಸ ಉಂಟು ಮಾಡಿದೆ. ಸಮಾಜ ಬಾಂಧವರಿಗೆ ಬೆಂಗಳೂರಿಗೆ ತೆರಳು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ನಾಗಮಾರಪಳ್ಳಿ ಹೇಳಿದ್ದಾರೆ.
ಸಮಾಜ ಬಾಂಧವರಾದ ಬಾಲಾಜಿ ಚವ್ಹಾಣ್, ವೆಂಕಟೇಶ ಮೆಯೆಂದೆ, ಗೋವಿಂದರಾವ ಪಾಟೀಲ್, ಸುರೇಶ ಟಕಳೆ, ವಿದ್ಯಾವಾನ್ ಪಾಟೀಲ್, ಬಾಲಾಜಿ ವಾಡೇಕರ್, ಆಕಾಶ ಬಿರಾದಾರ್, ಚಂದ್ರಕಾಂತ ಹಾಲಹಳ್ಳೆ, ಪರಮೇಶ್ವರ ಬಿರಾದಾರ್, ಮಲ್ಲಿಕಾರ್ಜುನ ಬಂಬೂಳಗೆ, ರಾಜಕುಮಾರ ಗಾದಗೆ, ಆನಂದ ಜಾಧವ, ಸಂಜಯ ಪಾಟೀಲ್ ಸೇರಿದಂತೆ 100ಕ್ಕೂ ಅಧಿಕ ಜನ ಬೆಂಗಳೂರಿಗೆ ತೆರಳಿದರು.