ಬೆಂಗಳೂರಲ್ಲಿ 17 ಸಾವಿರ ಮಂದಿಗೆ ಕೊರೊನಾ

ಬೆಂಗಳೂರು, ಏ.೨೪- ಕೋವಿಡ್ ಎರಡನೇ ಅಲೆ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಶನಿವಾರ ಮಧ್ಯಾಹ್ನ ಸುಮಾರಿಗೆ ೧೭,೫೯೭ ಜ ಕೋವಿಡ್ ಸೋಂಕು ದೃಢಪಟ್ಟಿದೆ ಮತ್ತಷ್ಟು ಆತಂಕ ಹೆಚ್ಚಿಸಿದೆ.

ನಗರದ ಬೊಮ್ಮನಹಳ್ಳಿಯಲ್ಲಿ ೧೮೩೫, ದಾಸರಹಳ್ಳಿಯಲ್ಲಿ ೪೭೩, ಪೂರ್ವ ವಲಯದಲ್ಲಿ ೨,೦೭೩, ಮಹದೇವಪುರ ೧,೬೮೨, ಆರ್ ಆರ್ ನಗರ ೧೨೭೫, ದಕ್ಷಿಣ ೩,೧೯೦, ಪಶ್ಚಿಮ ವಲಯ ೨,೩೧೩, ಯಲಹಂಕ ೧,೧೩೯ ದೃಢಪಟ್ಟಿದೆ.

ಇದಲ್ಲದೇ ಬೆಂಗಳೂರು ಹೊರವಲಯದಕ್ಕಿ ೧,೬೪೬ ಪ್ರಕರಣ ಕಂಡುಬಂದಿದ್ದು, ದಕ್ಷಿಣ ತಾಲೂಕು ೪೧೦, ಉತ್ತರ ತಾಲೂಕು ೨೬೧, ಪೂರ್ವ ತಾಲೂಕು ೧೬೦, ಆನೇಕಲ್ ೫೧೦ ಜನರಿಗೆ ಸೋಂಕು ಹಬ್ಬಿದೆ.

ಇನ್ನು, ಕಳೆದ ೨೪ ಗಂಟೆಗಳಲ್ಲಿ ೧೨೪ ಮಂದಿ ಕೋವಿಡ್?ಗೆ ಬಲಿಯಾಗಿದ್ದರು, ೧೬,೬೬೨ ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೧,೪೯,೬೨೪ ಕ್ಕೆ ಏರಿಕೆಯಾಗಿದೆ.