ಬೆಂಕಿ ಹತ್ತಿಕೊಂಡು ಹೊತ್ತುರಿದ ಕಾರ್

ಕಲಬುರಗಿ.ಡಿ.03: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನಗರದ ನೆಹರು ಗಂಜ್‍ನ ಹುಮನಾಬಾದ ರಸ್ತೆಯಲ್ಲಿರುವ ಭಾರತ್ ಪ್ರೈಡ್ -ಕೆಎಂಎಫ್ ಮುಂಭಾಗದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಹೋಗುತ್ತಿದ್ದ ಕಾರಿನಲ್ಲಿ ಸ್ಪಾರ್ಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡಿ ಕಾರಿಗೆ ಆವರಿಸಿದೆ. ಬೆಂಕಿ ಹೊತ್ತುತ್ತಲೇ ಚಾಲಕ ಕಾರ್‍ನಿಂದ ಇಳಿದು ಪಾರಾಗಿದ್ದಾರೆ. ಕಾರ್ ಯಾರಿಗೆ ಸೇರಿದ್ದು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಪತ್ತೆಯಾಗಿಲ್ಲ. ಕೆಎ-08 ಎಂ-4723 ಸಂಖ್ಯೆಯ ಐ ಟ್ವೆಂಟಿ ಕಾರಿದೆ.
ಜನರು ನೋಡ ನೋಡುತ್ತಲೇ ಬೆಂಕಿ ಆವರಿಸಿಕೊಂಡು ಧಗಧಗ ಉರಿಯಲಾರಂಭಿಸಿತು. ಜನರು ಗಾಬರಿ ಬಿದ್ದರು. ಆರಿಸಲು ಪ್ರಯತ್ನಿಸಿದರು. ಪ್ರಯೋಜನವಾಗಲಿಲ್ಲ. ಸುದ್ದಿ ಅರಿಯುತ್ತಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಇನ್‍ಸ್ಪೆಕ್ಟರ್ ಎಸ್.ಆರ್.ನಾಯಕ್ ಹಾಗೂ ಪೆÇಲೀಸ್ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿದರು. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.