ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಕೋಲಾರ,ಜ.೫: ಹತ್ತಾರು ಜನರಿಗೆ ಕಾರ್ ಡ್ರೈವಿಂಗ್ ಕಲಿಸುತ್ತಾ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಕೋಲಾರ ನಗರದ ಹೊರವಲಯದಲ್ಲಿ ಬೆಳಿಗ್ಗೆ ೭.೩೦ರ ಸುಮಾರಿಗೆ ಕೋಲಾರದ ಕಠಾರಿಪಾಳ್ಯ ನಿವಾಸಿ ನವೀನ್ ಕುಮಾರ್ ಎಂಬಾತ ಕೋಲಾರ ನಗರದ ಹೊರವಲಯ ಎಸ್‌ಡಿಸಿ ಕಾಲೇಜು ಬಳಿ ಕೋಲಾರಮ್ಮ ಕೆರೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನು ಕಂಡ ಸ್ಥಳೀಯರೊಬ್ಬರು ಕೋಲಾರ ನಗರ ಪೊಲೀಸ್ ಠಾಣೆಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದರು. ಮೇಲ್ನೋಟಕ್ಕೆ ಈ ಸಾವಿನ ಬಗ್ಗೆ ಅನುಮಾನ ಮೂಡಿತ್ತು, ಹಾಗಾಗಿ ಪೊಲೀಸ್- ಇಲಾಖೆಯ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಕೂಲಂಕುಶವಾಗಿ ಪರಿಶೀಲನೆ ನಡೆಸಿದರು ನಂತರ ಅವರ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಿದ ವೇಳೆ ಇದೊಂದು ಆತ್ಮಹತ್ಯಗೆ ಅನ್ನೋದು ತಿಳಿದು ಬಂದಿತು.
ಇನ್ನು ನವೀನ್ ಕೋಲಾರದಲ್ಲಿ ಮಂಜುನಾಥ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು, ಕಳೆದ ಏಳೆಂಟು ವರ್ಷಗಳಿಂದ ಸ್ವಲ್ಪ ಮಾನಸೀಕ ರೋಗಕ್ಕೆ ತುತ್ತಾಗಿದ್ದ ನವೀನ್ ಆಗಾಗ ಯಾರಿಗೂ ಹೇಳದೆ ಎಲ್ಲೆಂದರಲ್ಲಿ ಹೋಗುವುದು ಸ್ವಲ್ಪ ಮಾನಸೀಕ ರೋಗಿಯಂತೆ ವರ್ತಿಸುತ್ತಿದ್ದರಂತೆ ಅದಕ್ಕಾಗಿ ಅವರು ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು. ಹೀಗಿರುವಾಗಲೇ ನಿನ್ನೆ ನವೀನ್ ಅವರ ಅತ್ತೆ ಮೃತಪಟ್ಟಿದ್ದರಂತೆ ಅಲ್ಲಿ ಅಂತ್ಯಸಂಸ್ಕಾರಕ್ಕೆ ಹೋಗಿ ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ ನವೀನ್ ಇಂದು ಬೆಳಿಗ್ಗೆ ಎದ್ದು ತನ್ನ ಬೈಕ್‌ನಲ್ಲಿ ಎರಡು ಲೀಟರ್ ಪೆಟ್ರೋಲ್ ತೆಗೆದುಕೊಂಡು ಕೋಲಾರಮ್ಮ ಕೆರೆಗೆ ಬಂದು ಯಾರೂ ಇಲ್ಲದ ವೇಳೆ ತಾನೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶವ ಬಿದ್ದಿದ್ದ ಪರಿಸ್ಥಿತಿಯನ್ನು ಕಂಡಾಗ ಮೇಲ್ನೋಟಕ್ಕೆ ಇದು ಆತ್ಮಹತ್ಯೆನಾ ಅನ್ನೋ ಪ್ರಶ್ನೆ ಮೂಡುವಂತಿತ್ತು. ಕಾರಣ ಮೃತ ನವೀನ್ ತಾನು ಬೆಂಕಿ ಹಚ್ಚಿಕೊಂಡರೂ ಆಕಡೆ ಈಕಡೆ ಒದ್ದಾಡದೆ ಉಸಿರು ಬಿಗಿ ಹಿಡಿದು ಮಲಗಿದ್ದಾನೆ. ಅಷ್ಟೇ ಅಲ್ಲ ನಾಲಿಗೆಯನ್ನ ಕಚ್ಚಿದ್ದ. ಇದನ್ನು ಕಂಡ ಪೊಲೀಸರಿಗೆ ಇದು ಆತ್ಮಹತ್ಯೆನಾ ಅನ್ನೋ ಅನುಮಾನ ಮೂಡಿತ್ತು. ಆದರೆ ಬೆರಳಚ್ಚು ತಜ್ನರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ಕೂಲಕಂಕುಶ ಪರಿಶೀಲನೆ ನಡೆಸಿ ಆತ ಮಾನಸೀಕ ಸ್ಥಿತಿ ತಿಳಿದ ನಂತರ ಆತ ಆತ್ಮಹತ್ಯಗೆ ಸಿದ್ದವಾಗಿ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.