ಬೆಂಕಿ ಬಿದ್ದು ತೆಂಗಿನ ಸಸಿಗಳು ನಾಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.06: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದಾಸಗೊಳಪುರ ಗ್ರಾಮದಲ್ಲಿ ಬೆಂಕಿ ಬಿದ್ದು ಸುಮಾರು 150 ಕ್ಕೂ ಹೆಚ್ಚು ತೆಂಗಿನ ಸಸಿಗಳು ಬೆಂಕಿಗೆ ಆಹುತಿಯಾಗಿವೆ.
ಹರೀಶ್ ಬಿನ್ ರಂಗಪ್ಪ ಕೋಂ ಹುಚ್ಚೇಗೌಡ ಎಂಬುವವರಿಗೆ ಸರ್ವೆ ನಂ 18 ರಲ್ಲಿ 3-39 ಎಕರೆ ಜಮೀನಿದ್ದು ಇದರಲ್ಲಿ ತೆಂಗಿನಸಸಿ ನಾಟಿ ಮಾಡಲಾಗಿತ್ತು. ಕಳೆದ ನಾಲ್ಕುದಿನಗಳ ಹಿಂದೆ ಜಮೀನಿನಲ್ಲಿನ ಒಣ ಹುಲ್ಲಿಗೆ ಬೆಂಕಿ ಬಿದ್ದ ಪರಿಣಾಮ ಸುಮಾರು 150ಕ್ಕೂ ಹೆಚ್ಚು ತೆಂಗಿನ ಸಸಿಗಳು ಬೆಂಕಿಗೆ ಸುಟ್ಟುಹೋಗಿವೆ ಕೂಡಲೇ ಗ್ರಾಮಸ್ಥರು ಪಟ್ಟಣದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದು ಠಾಣಾಧಿಕಾರಿ ಶಿವಣ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಮಾಡಿ ಆಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಬಡ ರೈತ ಹರೀಶ್ ಇದರಿಂದ ಕಂಗಾಲಾಗಿದ್ದು ತಾಲ್ಲೂಕು ಆಡಳಿತ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.