ಬೆಂಕಿ ತಗುಲಿ ಸುಟ್ಟು ಕರಕಲಾದ ನಾಲ್ಕು ಎಕರೆ ಕಬ್ಬು

ಬೀದರ್:ಅ.16: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಾಲ್ಕು ಎಕರೆ ಕಬ್ಬು ಬೆಳೆ ಸುಟ್ಟು ಕರಕಲಾದ ಘಟನೆ ಬೀದರ್‍ನಲ್ಲಿ ನಡೆದಿದೆ.

ಬೀದರ್ ತಾಲೂಕಿನ ಖೇಣಿರಂಜೋಳ ಗ್ರಾಮದ ಪ್ರವೀಣ ದಾಳೆಂಬರೆ ಎಂಬ ರೈತನಿಗೆ ಸೇರಿದ ಕಬ್ಬು ಬೆಂಕಿಗಾಹುತಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರೂ ಸಂಪೂರ್ಣ ಬೆಂಕಿಗಾಹುತಿ ಆಗಿದೆ.

ಬೇರೆಯವರ ಜಮೀನಿನನ್ನು ಲಾವಣಿ (ಗುತ್ತಿಗೆ) ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು. ಆದರೆ, ಈಗ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿದೆ. ಸಾಲಸೊಲ ಮಾಡಿ ಬೆಳೆದ ಬೆಳೆ ಹಾನಿಯಾಗಿದ್ದು, ಆದಾಯದ ಮೂಲವಾಗಿದ್ದ ಕಬ್ಬು ನಾಶವಾಗಿದೆ. ಹೀಗಾಗಿ ಸರಕಾರ ಸೂಕ್ತ ಸಹಾಯ ನಿಡಬೇಕು ಎಂದು ಅಳಲು ತೊಡಿಕೊಂಡಿದ್ದಾರೆ.