
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.02 : ಪಟ್ಟಣದ 9ನೇ ವಾರ್ಡ್ ತುಂಗಭದ್ರಾ ಪ್ರೌಢಶಾಲೆ ಹಿಂದುಗಡೆ ಇರುವ ಕುರಿಹಟ್ಟಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ.
ಬಾಗಲಕೋಟಿ ರಾಮಣ್ಣ ಎಂಬುವವರು ಕುರಿಹಟ್ಟಿ ಸುಟ್ಟು ಹೋಗಿದೆ. ದುರಂತದಲ್ಲಿ ಕುರಿಹಟ್ಟಿಯ ಕೊಟ್ಟಿಗೆ, ತಗಡಿನ ಚಾವಣಿ ಭಸ್ಮವಾಗಿದೆ. ಕುರಿಗಳನ್ನು ಮೇಯಿಸಲು ಕರೆದೊಯ್ದಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಹತ್ತಿರದ ನಿವಾಸಿಗಳು ಬೆಂಕಿಯನ್ನು ನಂದಿಸಿ, ಪಕ್ಕದ ಕುರಿಹಟ್ಟಿಗಳಿಗೆ ಬೆಂಕಿ ವ್ಯಾಪಿಸದಂತೆ ತಡೆದಿದ್ದಾರೆ.