ಬೆಂಕಿ ಆಕಸ್ಮಿಕ: ಬಣವೆ ಭಸ್ಮ

ಲಕ್ಷ್ಮೇಶ್ವರ,ಮಾ.9: ತಾಲೂಕಿನ ಹರದಗಟ್ಟಿ ಗ್ರಾಮದ ರೈತನಾದ ಹುಸೇನಸಾಬ್ ಕಳಲಕೊಂಡ ಎಂಬವರಿಗೆ ಸೇರಿದ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ ಲಕ್ಷಾಂತರ ರೂ.ಮೌಲ್ಯದ ಬಣವೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ಜರುಗಿದೆ.
ಹರದಗಟ್ಟಿ ಗ್ರಾಮದ ರೈತ ಹುಸೇನಸಾಬ್ ಕಳಲಕೊಂಡ ಎಂಬುವರು ತಮ್ಮ ಜಮೀನಿನಲ್ಲಿ ಐದಾರು ಟ್ರ್ಯಾಕ್ಟರ್ ಹೊಟ್ಟಿನ ಬಣವೆಯನ್ನು ಸಂಗ್ರಹಿಸಿ ಇಟ್ಟಿದರು ಬುಧವಾರ 12 ಘಂಟೆಯ ಸುಮಾರಿಗೆ ಏಕಾಏಕಿ ಬೆಂಕಿ ತಗುಲಿ ಸಂಗ್ರಹಿಸಿ ಇಟ್ಟಿದ್ದ ಬಣವೆ ಸಂಪೂರ್ಣ ಸುಟ್ಟು ಬೂದಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ತಹಶಿಲ್ದಾರರಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.