ಬೆಂಕಿ ಅವಘಡ: ಲಾರಿ ಸುಟ್ಟು ಭಸ್ಮ

ವಿಜಯಪುರ,ಫೆ.16:ಚಲಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಲಾರಿ ಸುಟ್ಟು ಕರಕಲಾದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಚಲಿಸುತ್ತಿರುವ ಲಾರಿಯ ಚಕ್ರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅದು ಕ್ಷಣಾರ್ಧದಲ್ಲಿಯೇ ಇಡೀ ಲಾರಿಗೆ ವ್ಯಾಪಿಸಿ ಬೆಂಕಿ ಕೆನಾಲಿಗೆ ಚಾಚಿದ್ದರಿಂದಾಗಿ ಇಡೀ
ಲಾರಿ ಧಗಧಗನೇ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಿದೆ.
ಖಿಓ 29- ಅW 8877 ನಂಬರಿನ ಲಾರಿಗೆ ಬೆಂಕಿ ತಗಲುತ್ತಿದ್ದಂತೆಯೇ ಕೆಳಗಿಳಿದು ಲಾರಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಈ ಲಾರಿ ರಾಜಸ್ತಾನದಿಂದ ಬೆಂಗಳೂರಿಗೆ ಗ್ರಾನೈಟ್ ಕಲ್ಲು ಹೇರಿಕೊಂಡು ಹೋಗುತ್ತಿತ್ತು.
ಸುದ್ದಿ ತಿಳಿಯುತ್ತದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.
ಅಷ್ಟರಲ್ಲೇ ಇಡೀ ಲಾರಿ ಸುಟ್ಟು ಕರಕಲಾಗಿದೆ.
ಹೊರ್ತಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.