ಬೆಂಕಿ ಅವಘಡ: ಭಾರಿ ಹಾನಿ


ಬ್ಯಾಡಗಿ,ಫೆ.9: ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮನೆಯೊಂದರ ಮೊದಲ ಮಹಡಿ ಕಟ್ಟಡ ಸೇರಿದಂತೆ ಅಪಾರ ನಗನಾಣ್ಯ ಬೆಲೆಬಾಳುವ ಪೀಠೋಪಕರಣಗಳು ಸುಟ್ಟು ಭಸ್ಮಗೊಂಡ ಘಟನೆ ಪಟ್ಟಣದ ಬಸವೇಶ್ವರ ನಗರದಲ್ಲಿ ಗುರುವಾರ ಬೆಳಿಗ್ಗೆ ನಡೆದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಕಿ ಅವಘಡದಲ್ಲಿ ಭಸ್ಮವಾದ ಮನೆಯು ಪಟ್ಟಣದ ಮೆಣಸಿನಕಾಯಿ ವರ್ತಕರಾದ ವಿವೇಕಾನಂದ ಬೆಟಗೇರಿ, ಕುಟುಂಬಕ್ಕೆ ಸೇರಿದ್ದು ಘಟನಾ ಸ್ಥಳಕ್ಕೆ ತಹಶೀಲ್ಧಾರ ಫಿರೋಜ್‍ಶಾ ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಸಿಪಿಐ ಮಹಾಂತೇಶ ಲಂಬಿ, ಪಿಎಸ್‍ಐ ಗಂಗೆನಹಳ್ಳಿ, ಎಎಸ್‍ಐ ಗಳಾದ ಬಸವರಾಜ ಅಂಜುಟಗಿ, ಉಜ್ಜನಗೌಡ ನಂದಿಗೌಡ್ರ ಹಾಗೂ ಹೆಸ್ಕಾಂನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತಂತೆ ಬ್ಯಾಡಗಿ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ಮುಂದುವರೆದಿದೆ.