ಬೆಂಕಿ ಅವಘಡ: ಬೇಕರಿ ಸುಟ್ಟು ಕರಕಲು

ಇಂಡಿ,ಏ.5-ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿರುವ ಕೆಎಸ್‍ಆರ್‍ಟಿಸಿ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಬೇಕರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸರಫರಾಜ ಕೊಕಣೆ ಅವರಿಗೆ ಸೇರಿದ ಅಂಗಡಿ ಇದಾಗಿದೆ. ಅಗ್ನಿ ಶಾಮಕ ದಳ ಬಂದು ಬೆಂಕಿ ನಂದಿಸುವುದರೊಳಗೆ ಬೇಕರಿ ಸಂಪೂರ್ಣ ಸುಟ್ಟು ಹೋಗಿದೆ.
ಅಂದಾಜು 3 ರಿಂದ 4 ಲಕ್ಷ ರೂ. ಹಾನಿಯಾಗಿದೆ ಎಂದು ಅಂಗಡಿ ಮಾಲಿಕ ಶರಫರಾಜ್ ಕೊಕಣೆ ಹೇಳಿದ್ದಾರೆ. ನಗರ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.