ಬೆಂಕಿಹಚ್ಚಿಕೊಂಡು ಸಾವುನಾಲ್ವರು ಮಹಿಳೆಯರಿಗೆ 7 ವರ್ಷ ಜೈಲುಶಿಕ್ಷೆ

ಕಲಬುರಗಿ ಜು 29: ಮಾನಸಿಕ ದೈಹಿಕ ಹಿಂಸೆಯಿಂದ ಮನನೊಂದು v ಮಹಿಳೆಯ ಸಾವಿಗೆ ಕಾರಣರಾದ ಆರೋಪ ಸಾಬೀತಾದ್ದರಿಂದ ಮಹಿಳೆಯ ಅತ್ತೆ ಮತ್ತು ಮೂವರು ನಾದಿನಿಯರಿಗೆ 3 ನೇಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಕರೋಷಿ ಅವರು 7 ವರ್ಷ ಸಾದಾಶಿಕ್ಷೆ ಮತ್ತು 30 ಸಾವಿರ ರೂ ದಂಡ ವಿಧಿಸಿದ್ದಾರೆ.
ಮೃತ ಮಹಿಳೆಯ ತಹಸಿನ್ ಅವರ ಅತ್ತೆ ಉಮೇರಾ ಬೇಗಂ, ನಾದಿನಿಯರಾದ ಹಿನಾ ಇಮಾಮೋದ್ದಿನ್ ,ನಿಲೋಫರ್ ಶಿರಾಜ್ ಪಟೇಲ್, ಮತ್ತು ಸಮ್ರೀನ್ ಉರ್ಫ ಶಮಾ ಸೈಂiÀiದ್ ಪಟೇಲ್ ಶಿಕ್ಷೆಗೊಳಗಾದ ಮಹಿಳೆಯರು.
ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಡಬರಾಬಾದ್ ಕ್ರಾಸ್ ಬಳಿಯ ನಿವಾಸಿ ಗೌಸ್ ಪಟೇಲ್ ಎಂಬಾತನ ಪತ್ನಿ ತಹಸಿನ್‍ಗೆ ಗಂಡ ಮತ್ತು ಅತ್ತೆ,ನಾದಿನಿಯರು ಮಾನಸಿಕ, ದೈಹಿಕ ಕಿರುಕುಳ ನೀಡಿ ಮನೆ ಬಿಟ್ಟು ಹೋಗುವಂತೆ ಬೆದರಿಕೆ ಹಾಕುತ್ತಿದ್ದರು.ಇದರಿಂದ ನೊಂದ ಮಹಿಳೆ 2017 ರ ಆಗಸ್ಟ್ 13 ರಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಳು.ಅಂದಿನ ಗ್ರಾಮೀಣ ಠಾಣೆ ಪಿಎಸ್‍ಐ ಚಂದ್ರಶೇಖರ ತಿಗಡಿ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ದಂಡವಿಧಿಸಿದ ಮೊತ್ತದಲ್ಲಿ 20 ಸಾವಿರ ರೂ ಮೃತಳ ಮಕ್ಕಳಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.ಸರಕಾರದ ಪರವಾಗಿ 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪÀ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.